ಕಾಂಗ್ರೆಸ್ ನೇತೃತ್ವದ ಮೇಘಾಲಯ ಯುನೈಟೆಡ್ ಅಲೈಯನ್ಸ್ ಸರಕಾರವು ಬುಧವಾರ ವಿಧಾನ ಸಭೆಯಲ್ಲಿ ವಿಶ್ವಾಸಮತ ಯಾಚಿಸಲಿದೆ. ಡಿ.ಡಿ ಲಪಾಂಗ್ ನೇತೃತ್ವದ ಸರಕಾರದ ವಿರುದ್ಧ ಶಾಸಕರು ಅಸಂತುಷ್ಟಗೊಂಡಿರುವುದರಿಂದ ಸರಕಾರ ವಿಶ್ವಾಸಯಾಚನೆಯಲ್ಲಿ ಜಯಶಾಲಿಯಾಗಲಿಕ್ಕಿಲ್ಲ.
60 ಸದಸ್ಯರ ಬಲ ಹೊಂದಿರುವ ವಿಧಾನ ಸಭೆಯಲ್ಲಿ ಕಾಂಗ್ರೆಸ್ 28 ಸದಸ್ಯ ಬಲ ಹೊಂದಿದ್ದು, ಮೂವರು ಪಕ್ಷೇತರರು ಆಯ್ಕೆಯಾಗಿರುವುದರಿಂದ ವಿರೋಧ ಪಕ್ಷದ ಸ್ಥಾನದಲ್ಲಿ ಇರುವ ಮೇಘಾಲಯ ಪ್ರೋಗ್ರೆಸಿವ್ ಅಲೈಯನ್ಸ್‌ನ ಸದಸ್ಯರನ್ನು ತಮ್ಮತ್ತ ಸೆಳೆದುಕೊಳ್ಳುವ ಪ್ರಯತ್ನ ಮಾಡುತ್ತಿದೆ.
ಕಾಂಗ್ರೆಸ್ ಮೂಲಗಳ ಪ್ರಕಾರ ಚುನಾವಣೆಯ ನಂತರ ಪ್ರಮಾಣ ವಚನ ಸ್ವೀಕರಿಸಿದ ಲಪಾಂಗ್ ಅವರು ವಿಶ್ವಾಸ ಮತಯಾಚನೆಗೆ ಮುನ್ನ ರಾಜೀನಾಮೆ ನೀಡುವ ಸಾಧ್ಯತೆ ಇದೆ.
ಸರಕಾರದ ಬಲದ ಮುನ್ಸೂಚನೆ ನೀಡುವ ಸ್ಪೀಕರ್ ಚುನಾವಣೆಯನ್ನು ಎಂಪಿಎ ವಿರೋಧಿಸಿದ ಕಾರಣ ಮುಂದೂಡಲಾಗಿದೆ. ಎನ್‌ಸಿಪಿ ಅಧ್ಯಕ್ಷ ಪಿ. ಎ ಸಂಗ್ಮಾ ಅವರು ಗೌರವಯುತವಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ಲಪಾಂಗ್ ರಾಜೀನಾಮೆ ನೀಡಿ ಕೆಳಗೆ ಇಳಿಯಬೇಕು ಎಂದು ಕೇಳಿಕೊಂಡಿದ್ದಾರೆ.
|