ಆಂಧ್ರಪ್ರದೇಶದ ಕಮ್ಮಮ್ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ನಡೆದ ಪೊಲೀಸ್ ಮತ್ತು ನಕ್ಸಲೀಯರ ಘರ್ಷಣೆಯಲ್ಲಿ 12 ಮಂದಿ ನಕ್ಸಲೀಯರು ಹತರಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಚೆರ್ಲಾ ಮತ್ತು ಪಮೆಡು ಪ್ರದೇಶದಲ್ಲಿ ನಕ್ಸಲೀಯರಿಗಾಗಿ ಕಾರ್ಯಾಚರಣೆ ನಡೆಸುತ್ತಿದ್ದ ವಿಶೇಷ ಪೊಲೀಸ್ ಪಡೆಗಳು ನಕ್ಸಲೀಯರ ಆಗಮನ ಕುರಿತಂತೆ ಖಚಿತ ಸುಳಿವು ಪಡೆದು ದಾಳಿ ನಡೆಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ
ಪೊಲೀಸರಿಂದ ಹತರಾದ ನಕ್ಸಲೀಯರ ಗುರುತುಗಳು ಇಲ್ಲಿಯವರೆಗೆ ಪತ್ತೆಯಾಗಿಲ್ಲವಾದರೂ ಇಬ್ಬರು ಮಾವೊವಾದಿಗಳ ಮುಖಂಡರಿರಬಹುದು ಎಂದು ಶಂಕಿಸಲಾಗಿದೆ.
ಇಲ್ಲಿಯವರೆಗೆ 10 ನಕ್ಸಲೀಯರ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಎರಡು ಎ.ಕೆ 47 ಮತ್ತು ನಾಲ್ಕು ಅತ್ಯಾಧುನಿಕ ಗನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
|