ದರ ಹೆಚ್ಚಳ ಸಹಿಸಲಸಾಧ್ಯ ಹಾಗೂ ಆತಂಕ ಮೂಡಿಸುವಂತಹದು ಎಂದು ಎಡಪಕ್ಷಗಳು ಸರಕಾರದ ವಿರೋಧಿಯನ್ನು ತರಾಟೆಗೆ ತೆಗೆದುಕೊಂಡು ಉಭಯ ಸದನಗಳಲ್ಲಿ ಕಲಾಪವನ್ನು ಬಹಿಷ್ಕರಿಸಿದವು.
ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಆದರೆ ರೋಗಿ ಮೃತನಾಗಿದ್ದಾನೆ ಎಂದಂತೆ ಕೇಂದ್ರ ಹಣಕಾಸು ಸಚಿವರ ತಪ್ಪು ನಿರ್ಧಾರಗಳಿಂದ ದೇಶದಲ್ಲಿ ದರ ಹೆಚ್ಚಳ ಕಂಡುಬರುತ್ತಿದೆ ಎಂದು ಸಿಪಿಐ (ಎಂ) ನಾಯಕ ಸೀತಾರಾಮ್ ಯಚೂರಿ ತಿಳಿಸಿದ್ದಾರೆ.
ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಬಜೆಟ್ ಮಂಡಿಸಿದ ನಂತರ ದರಗಳಲ್ಲಿ ಹೆಚ್ಚಳವಾಗಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ ಹಾಗೂ ಆತಂಕ ಮೂಡಿಸುವಂತಾಗಿದೆ ಎಂದು ಸಿಪಿಐ ನಾಯಕ ಗುರುದಾಸ್ ದಾಸಗುಪ್ತಾ ತಿಳಿಸಿದ್ದಾರೆ.
ಬಜೆಟ್ ಮತ್ತು ಆರ್ಥಿಕ ನೀತಿಗಳು ದೇಶದಲ್ಲಿ ದರ ಹೆಚ್ಚಳಕ್ಕೆ ಮೂಲವಾಗಿವೆ. ಕೇಂದ್ರ ಹಣಕಾಸು ಸಚಿವರ ತಪ್ಪು ನಿರ್ಧಾರಗಳಿಂದ ದರ ಹೆಚ್ಚಳ ಸಮಸ್ಯೆ ಎದುರಾಗಿದೆ ಎಂದು ಹೇಳಿದ್ದಾರೆ.
|