ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಲ್ವಾ ಜುಡುಮ್ ನೀತಿ ಪರಿಶೀಲನೆ ಅನಿವಾರ್ಯ: ಎಆರ್‌ಸಿ
ಎಡಪಂಥಿಯ ವಾದಿಗಳಿಂದ ಅದರಲ್ಲೂ ಛತ್ತಿಸಗಡ್ ರಾಜ್ಯದಲ್ಲಿ ಹೆಚ್ಚುತ್ತಿರುವ ಹಿಂಸೆಯನ್ನು ಗಂಭೀರವಾಗಿ ಪರಿಗಣಿಸಿರುವ ಆಡಳಿತ ಸುಧಾರಣಾ ಆಯೋಗವು ಗಂಭೀರ ಪರಿಸ್ಥಿತಿ ಹಾಗೆಯೇ ಮುಂದುವರಿದಿರುವುದರಿಂದ ಛತ್ತಿಸಗಡ್ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿರುವ ಸಲ್ವಾ ಜುಡುಮ್ (ಸ್ವರಕ್ಷಣಾ ಗುಂಪು) ನೀತಿಯನ್ನು ಪರೀಶಿಲಿಸಬೇಕಿದೆ ಎಂದು ಅದು ಹೇಳಿದೆ.

2003ರಿಂದ ಇಲ್ಲಿಯವರೆಗೆ ಛತ್ತಿಸಗಡ್ ರಾಜ್ಯದಲ್ಲಿ ನಕ್ಸಲ್ ಹಿಂಸಾಚಾರದಲ್ಲಿ ಹೆಚ್ಚಳವಾಗಿದೆ. ರಾಜ್ಯದಲ್ಲಿ ಹಬ್ಬುತ್ತಿರುವ ನಕ್ಸಲಿಸಂ ವಾದವನ್ನು ಹತ್ತಿಕ್ಕಬೇಕಾದಲ್ಲಿ ರಕ್ಷಣಾ ಪಡೆಗಳ ಸಾಮರ್ಥ್ಯ ಮತ್ತು ಆಧುನಿಕಕರಣವಾಗಬೇಕಿದೆ. ಸಾಮಾಜಿಕ ಅಭಿವೃದ್ದಿಯಲ್ಲಿ ಹಿಂದುಳಿದ ಪ್ರದೇಶಗಳಿಗೆ ಆದಷ್ಟು ಒತ್ತು ನೀಡಬೇಕಾದ ಅವಶ್ಯಕತೆ ಇದೆ ಎಂದು ವೀರಪ್ಪ ಮೊಯಿಲಿ ನೇತೃತ್ವದ ಆಡಳಿತ ಸುಧಾರಣಾ ಆಯೋಗವು ಇತ್ತೀಚೆಗೆ ಬಿಡುಗಡೆ ಮಾಡಿರುವ ವರದಿಯಲ್ಲಿ ಹೇಳಿದೆ.

ರಾಜ್ಯದ ಜನತೆಯನ್ನು ನಕ್ಸಲಿಸಂ ವಿರುದ್ಧ ಹೋರಾಡಲು ಅಸ್ತಿತ್ವಕ್ಕೆ ಬಂದ ಸಲ್ವಾ ಜುಡುಮ್ ಕುರಿತು ನೀಡಿರುವ ವರದಿಯಲ್ಲಿ ಆಯೋಗವು ಸ್ಥಳೀಯರನ್ನು ನಕ್ಸಲಿಸಂ ಹೋರಾಟಕ್ಕೆ ಅಣಿ ಮಾಡುವ ನೀತಿ ನಿರೀಕ್ಷಿತ ಮಟ್ಟದಲ್ಲಿ ಫಲ ನೀಡಿಲ್ಲ. ಇಂದು ಸಲ್ವಾ ಜುಡುಮ್ ಸ್ವತಃ ಬುಡಕಟ್ಟು ಜನರ ಸ್ವಾತಂತ್ರ್ಯಕ್ಕೆ ಕುತ್ತು ತಂದಿದೆ ಎಂದು ಹೇಳಿದೆ.
ಮತ್ತಷ್ಟು
ದರ ಹೆಚ್ಚಳ: ಎಡಪಕ್ಷಗಳಿಂದ ಕಲಾಪ ಬಹಿಷ್ಕಾರ
ಆಂಧ್ರದಲ್ಲಿ 12 ನಕ್ಸಲೀಯರ ಹತ್ಯೆ
ಮೇಘಾಲಯ ಬುಧವಾರ ವಿಶ್ವಾಸ ಮತಯಾಚನೆ
ಸೇನಾಧಿಕಾರಿಗಳಿಂದ ಅತ್ಯಾಚಾರ:ತನಿಖೆಗೆ ಆದೇಶ
ಸ್ವೀಡನ್‌‌‌ನತ್ತ ತಸ್ಲೀಮಾ ಪಯಣ
ಶಿವಾನಿ ಕೊಲೆ ಪ್ರಕರಣ: ಆರ್. ಕೆ. ಶರ್ಮಾ ಅಪರಾಧಿ