ಮೇಘಾಲಯದಲ್ಲಿ ನೂತನವಾಗಿ ಅಧಿಕಾರವಹಿಸಿಕೊಂಡ ಮುಖ್ಯಮಂತ್ರಿ ಡಿ.ಡಿ ಲಪಂಗ್ ವಿಧಾನಸಭೆಯಲ್ಲಿ ಬಲಪರೀಕ್ಷೆ ಎದುರಿಸುವ ಬದಲಾಗಿ ರಾಜೀನಾಮೆ ನೀಡಲು ಸಿದ್ದರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್ ಪಕ್ಷಕ್ಕೆ ನಿರೀಕ್ಷಿಸಿದ ಬೆಂಬಲ ದೊರೆಯುವ ಸಾಧ್ಯತೆಗಳಿಲ್ಲವಾದ್ದರಿಂದ ರಾಜೀನಾಮೆ ನೀಡಲು ನಿರ್ಧರಿಸಿದ್ದೆನೆ ಎಂದು ಮುಖ್ಯಮಂತ್ರಿ ಲಪಂಗ್ ಕಾಂಗ್ರೆಸ್ ಶಾಸಕರ ಸಭೆಯ ನಂತರ ತಿಳಿಸಿದ್ದಾರೆ.
ಮುಖ್ಯಮಂತ್ರಿ ಲಪಂಗ್ ರಾಜ್ಯಪಾಲ ಎಸ್.ಎಸ್ ಸಿದ್ದು ಅವರನ್ನು ಭೇಟಿ ಮಾಡಿ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ ಎಂದು ರಾಜಭವನದ ಮೂಲಗಳು ತಿಳಿಸಿವೆ.
ವಿರೋಧಪಕ್ಷವಾದ ಮೇಘಾಲಯ ಪ್ರೋಗ್ರೆಸಿವ್ ಅಲೈಯನ್ಸ್ ಕೇವಲ ಮೂರು ತಿಂಗಳು ಮಾತ್ರ ಅಧಿಕಾರ ನಡೆಸಲು ಸಾಧ್ಯ ನಂತರ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ಲಪಂಗ್ ತಿಳಿಸಿದ್ದಾರೆ.
ಎಂಪಿಎ ಪಕ್ಷ ಸರಕಾರವನ್ನು ರಚಿಸಲು ರಾಜ್ಯಪಾಲರನ್ನು ಭೇಟಿ ಮಾಡಲು ಉದ್ದೇಶಿಸಿದ್ದು,ತಾವು ಮುಖ್ಯಮಂತ್ರಿ ಸ್ಥಾನದ ಅಭ್ಯರ್ಥಿಯಲ್ಲ ಎಂದು ಎನ್‌ಸಿಪಿ ನಾಯಕ ಪಿ.ಎ.ಸಂಗ್ಮಾ ತಿಳಿಸಿದ್ದಾರೆ.
|