ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸರಬ್ಜಿತನನ್ನು ಗಲ್ಲಿಗೇರಿಸಬಹುದು: ಪತ್ನಿ
ಪಂಜಾಬ್‌ನ ಗಟ್ಟಿ ಹೆಣ್ಣು ಮತ್ತೆ ಈ ಬಾರಿ ಮಾತನಾಡಿದೆ. ಇತಿಹಾಸದ ಕಾಲಗರ್ಭದಲ್ಲಿ ಇಂದು ಮುಚ್ಚಿ ಹೋಗಿರುವ ಶಹೀದ್ ಭಗತ್ ಸಿಂಗ್‌ನ ತಾಯಿ ಅಂದು ಹೇಳಿದ ಮಾತಿನ ಅರ್ಥದಲ್ಲೇ ಸುರಪ್ರೀತ್ ಕೌರ್ ಮಾತನಾಡಿದ್ದಾಳೆ. ಭಾರತೀಯ ಜೈಲುಗಳಲ್ಲಿ ಬಂಧಿಸಲ್ಪಟ್ಟಿರುವ ಉಗ್ರರನ್ನು ಬಿಡುಗಡೆ ಮಾಡಿ ನನ್ನ ಗಂಡನನ್ನು ಸುರಕ್ಷಿತವಾಗಿ ತರುವುದು ತನಗೂ ಇಷ್ಟವಿಲ್ಲ. ತನ್ನ ಮಕ್ಕಳಿಗೂ ಇಷ್ಟವಿಲ್ಲ. ಬೇಕಿದ್ದರೆ ಪಾಕಿಸ್ತಾನ ಸರಬ್ಜಿತ್‌ನನ್ನು ಗಲ್ಲಿಗೇರಿಸಬಹುದು ಎಂದಿದ್ದಾಳೆ.

ಲಾಹೋರ್ ಜೈಲಿನಲ್ಲಿ ನಿಧಾನವಾಗಿ ನೇಣಿನ ಕುಣಿಕೆಗೆ ಹತ್ತಿರವಾಗುತ್ತಿರುವ ಭಾರತೀಯ ಸರಬ್ಜಿತ್ ಸಿಂಗ್‌ಗೆ ವಿಧಿಸಿರುವ ಶಿಕ್ಷೆಯನ್ನು ಸಧ್ಯಕ್ಕೆ ಒಂದು ತಿಂಗಳಕಾಲ ಮುಂದೂಡಲಾಗಿದ್ದು. ಆದರೆ ಈ ಮುಂದೂಡಿಕೆಯಾಗಲಿ ಉಗ್ರರ ಬಿಡುಗಡೆ ಮಾಡಿ ನನ್ನ ಗಂಡನ ಜೀವ ಉಳಿಸಿಕೊಳ್ಳುವುದು ನನಗೆ ಬೇಕಿಲ್ಲ. ಕುಟುಂಬಕ್ಕಿಂತ ತಾಯ್ನೆಲದ ಹಿತವೇ ಪರಮೋಚ್ಚ ಎಂದಿದ್ದಾಳೆ ಸುರಪ್ರೀತ್ ಕೌರ್.

ಪಾಕಿಸ್ತಾನ ಅಧ್ಯಕ್ಷ ಪರ್ವೇಜ್ ಮುಷರಫ್ ಅವರು ಸರಬ್ಜಿತ್ ಸಿಂಗ್ ಗಲ್ಲು ಶಿಕ್ಷೆಯನ್ನು ಒಂದು ತಿಂಗಳುಗಳ ಕಾಲ ಮುಂದೂಡಿದ ನಂತರ ಭಾರತ ಸರಕಾರವು ಪಾಕಿಸ್ತಾನಿ ನಾಗರಿಕ ಜಮಾಲ್ ಖುರೇಷಿಯನ್ನು ಬಿಡುಗಡೆ ಮಾಡಿರುವುದನ್ನು ಇಲ್ಲಿ ಸ್ಮರಿಸಬಹುದು.
ಮತ್ತಷ್ಟು
ಅಡ್ವಾಣಿಯವರ ಮೈ ಲೈಫ್ ಮೈ ಕಂಟ್ರಿ ಬಿಡುಗಡೆ
ಗೋವಾದಲ್ಲಿ ಇಸ್ರೇಲಿ ಮಹಿಳೆಯ ನಿಗೂಢ ಸಾವು
ಹೃದಯಾಘಾತ: ನಟ ರಘುವರನ್ ಸಾವು
ಸರಬ್ಜಿತ್ ಸಿಂಗ್ ಗಲ್ಲು ಶಿಕ್ಷೆ ಮುಂದೂಡಿಕೆ
ನೀರು ಹಂಚಿಕೆ: ತ.ನಾಡು ಕೇರಳ ಮಾತುಕತೆ
ಮೇಘಾಲಯ:ಮುಖ್ಯಮಂತ್ರಿಯಾಗಿ ರಾಯ್ ನೇಮಕ