ನಕ್ಸಲರ ಸಮಸ್ಯೆಯನ್ನು ತುಂಬಾ ದೊಡ್ಡ ಸಮಸ್ಯೆಯನ್ನಾಗಿ ಪರಿಗಣಿಸಿದರೆ ಜನರಲ್ಲಿ ಆತಂಕ ಮತ್ತು ಭಯ ಹೆಚ್ಚಾಗುತ್ತದೆ. ನಮ್ಮ ದೇಶ ದಲ್ಲಿರುವ ಸುಮಾರು 6.5 ಲಕ್ಷ ಹಳ್ಳಿಗಳ ಪೈಕಿ ನಕ್ಸಲ್ ಸಮಸ್ಯೆ ಕೇವಲ ಶೇ.2 ರಷ್ಟು ಮಾತ್ರ ಇದೆ ಎಂದು ಸರಕಾರ ಬುಧವಾರದಂದು ತಿಳಿಸಿದೆ. ಭಾರತದ್ಲಲಿ ಒಟ್ಟು 10 ರಾಜ್ಯ ಮತ್ತು 180 ಜಿಲ್ಲೆಗಳು ನಕ್ಸಲೀಯರ ಸಮಸ್ಯೆಯನ್ನು ಎದುರುಸುತ್ತಿದೆ ಎಂದು ಗೃಹ ಮಂತ್ರಿ ಶಿವರಾಜ್ ಪಾಟೀಲ್ ಅವ ರು ರಾಜ್ಯಸಭೆಗೆ ತಿಳಿಸಿದರು. ಪ್ರತ್ಯೇಕ ರಾಜ್ಯ ಮತ್ತು ಜಿಲ್ಲೆಗಳನ್ನು ಪರಿಗಣಿಸಿದರೆ ಇದೊಂದು ದೊಡ್ಡ ಸಮಸ್ಯೆಯಂತೆ ಕಾಣುತ್ತದೆ. ಆದರೆ ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ, ದೇ ಶದಲ್ಲಿ ಕೇವಲ 14,000 ಸಾವಿರ ನಕ್ಸಲೀಯರು ಇದ್ದು ಅವರ ಕೃತ್ಯವನ್ನು ನಿಯಂತ್ರಿಸಲು ಸುಮಾರು 300 ಪೊಲೀಸ್ ಠಾಣೆಗಳು ಕಾರ್ಯನಿರ್ವಹಿಸು ತ್ತಿವೆ. ಈ 14,000 ನಕ್ಸಲೀಯರು ತಮ್ಮ ಚಟುವಟಿಕೆಗಳನ್ನು ಹಳ್ಳಿಗಳಲ್ಲಿ ನಡೆಸುತ್ತಿರುವುದು ಗಮನಾರ್ಹ.
ಇದುವರೆಗ ನಕ್ಸಲೀಯರ ಗಲಭೆಗೆ ಸಂಬಂಧಿಸಿದಂತೆ 700 ಪ್ರಕರಣಗಳು ದಾಖಲಾಗಿವೆ. ನಕ್ಸಲೀಯರ ಸಮಸ್ಯೆಯನ್ನು ದೇಶದ ನಡೆದ ಇತರೇ ಭ ಯೋತ್ಪಾದನೆ ಚಟುವಟಿಕೆಗಳಿಗೆ ಹೋಲಿಸಿದರೆ ಶೇ.1.1 ರಷ್ಟು ಮಾತ್ರ ಇದೆ. ಇದನ್ನು ತಡೆಗಟ್ಟಲು ಸರಕಾರ ಎಲ್ಲಾ ಕ್ರಮವನ್ನು ಕೈಗೊಂಡಿದೆ. ಈ ಸಮಸ್ಯೆಯನ್ನು ದೊಡ್ಡದು ಮಾಡಿ ಜನರಲ್ಲಿ ಆತಂಕ ಸೃಷ್ಟಿಸಲು ಅವಕಾಶ ನೀಡುವುದಿಲ್ಲಾ ಎಂದು ಪಾಟೀಲ್ ತಿಳಿಸಿದರು.
ಚತ್ತೀಸಗಡದಲ್ಲಿ ನಕ್ಸಲರ ಸಮಸ್ಯೆ ಹೆಚ್ಚಾಗಿದ್ದು, ಈ ಸಮಸ್ಯೆಯನ್ನು ತೆಡೆಗಟ್ಟಲು ರಾಜ್ಯ ಸರಕಾರಕ್ಕೆ ಕೇಂದ್ರ, ಸುಮಾರು 15,000 ಸಾವಿರ ಕೇಂದ್ರ ಅಧಿಕಾರಿಗಳು, ಶಸ್ತ್ರ ಸಜ್ಜಿತ ವಾಹನ, ಹೆಲಿಕಾಪ್ಟರ್ ಮತ್ತು ಆಯುಧ ಖರೀದಿಗೆ ಹಣ ನೀಡಿದೆ ಎಂದು ಅವರು ತಿಳಿಸಿದರು.
ದೇಶದಲ್ಲಿ ಹೆಚ್ಚುತ್ತಿರುವ ನಕ್ಸಲೀಯರ ಸಮಸ್ಯೆಯನ್ನು ಹತ್ತಿಕ್ಕಲು ಸರಕಾರ ವಿವಿಧ ಕಾರ್ಯಕ್ರಮವನ್ನು ರೂಪಿಸಿದೆ. ಅಲ್ಲದೆ ನಕ್ಸಲ್ ಪೀಡಿತ ಪ್ರದೇಶದ ಜನರಲ್ಲಿ ಜಾಗೃತಿಯನ್ನು ಮೂಡಿಸುವ ಕಾರ್ಯಕ್ರಮವನ್ನೂ ಹಮ್ಮಿಕೊಂಡಿದೆ ಎಂದು ಶಿವರಾಜ್ ಪಾಟೀಲ್ ತಿಳಿಸಿದರು.
|