ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸರ್ವಧರ್ಮ ಸಮನ್ವಯತೆಯ ಭಾರತಕ್ಕೆ ಶುಭ ಶುಕ್ರವಾರ
ಸರ್ವ ಧರ್ಮವನ್ನು ಸಮನ್ವಯತೆಯನ್ನು ತನ್ನ ಸಂವಿಧಾನ ಮತ್ತು ಅನಾದಿಕಾಲದಿಂದಲೂ ಆಚರಿಸಿಕೊಂಡು ಭಾರತಕ್ಕೆ ಭಾರತೀಯರಿಗೆ ದಿ 21 ರಂದು ಬಂದಿರುವ ಶುಕ್ರವಾರದಂದು ಬಹುತೇಕ ಭಾರತೀಯರೆಲ್ಲರೂ ಒಟ್ಟಾಗಿ ಈ ದಿನವನ್ನು ಹಬ್ಬದ ರೂಪದಲ್ಲಿ ಆಚರಿಸುತ್ತಿದ್ದಾರೆ.

ಮಾರ್ಚ್ 21 ಈ ಶುಕ್ರವಾರ(ಇಂದು) ಹಿಂದೂ, ಮುಸಲ್ಮಾನ, ಪಾರ್ಸಿ ಮತ್ತು ಕ್ರೈಸ್ತರಿಗೂ ವಿಶೇಷ ದಿನವಾಗಿದ್ದು ಭಾರತೀಯ ನಾಗರಿಕರಿಗಿದು ಅಪೂರ್ವ ದಿನ.

ಹಿಂದೂಗಳಿಗೆ ಇಂದು ಬಣ್ಣದೋಕುಳಿಯ 'ಛೋಟಿ ಹೋಳಿ'ಯಾದರೆ. ಮುಸ್ಮಲ್ಮಾನರಿಗೆ ಪ್ರವಾದಿ ಹುಟ್ಟಿದ ಮತ್ತು ಅಸ್ತಂಗತರಾಗಿರುವ ಪವಿತ್ರ 'ಈದ್ ಮಿಲಾದ್'. ಪ್ರಭು ಏಸುವನ್ನು ಶಿಲುಬೆಗೇರಿಸಿದ ಈ ದಿನವನ್ನು ಕ್ರೈಸ್ತರಿಗೆ 'ಗುಡ್ ಫ್ರೈಡೆ' ಯಾದರೆ, ಪಾರ್ಸಿ ಮತ್ತು ಇರಾನಿಗಳಿಗಳಿಗೆ 'ನವ್ರೋಜ್' ಹಬ್ಬ .

'ಛೋಟಿ ಹೋಳಿ'- ಕರ್ನಾಟಕ ಸಹಿತ ದೇಶದಾದ್ಯಂತ ಹಿಂದೂಗಳು ಬಣ್ಣದ ಹೋಳಿಯನ್ನು ಆಚರಿಸುತ್ತಾರೆ. ಪ್ರತಿ ಪಾಲ್ಗುಣ ಮಾಸದ ಹುಣ್ಣಿಮೆಯಂದು ಹೋಳಿ ಆಚರಣೆ ನಡೆಯುತ್ತದೆ. ಕಾಮದಹನ, ರಂಗಿನಾಟವೇ ಇದರ ವಿಶೇಷ. ಶನಿವಾರ ಹೋಳಿ ಹುಣ್ಣಮೆಯಾಗಿರುವ ಕಾರಣ ಶುಕ್ರವಾರ 'ಛೋಟಿ ಹೋಳಿ'.

'ಈದ್ ಮಿಲಾದ್'- ಮುಸ್ಲಿಮರು ಆಚರಿಸುವ ಮೂರು ಪವಿತ್ರ ಈದ್ ಹಬ್ಬಗಳಲ್ಲಿ 'ಈದ್ ಮಿಲಾದ್' ಕೂಡಾ ಸೇರಿದೆ. ಪ್ರವಾದಿ ಮಹಮ್ಮದ್ ಪೈಗಂಬರ್ ಅವರು ಹುಟ್ಟಿದ ಮತ್ತು ಅಸ್ತಂಗತವಾದ ಈ ದಿನ, ಮುಸಲ್ಮಾನರು ಮಸೀದಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿ ಬಳಿಕ ಸೂಜಿ ಹಲ್ವಾ ತಯಾರಿಸಿ ಬಂಧುಗಳಿಗೆ ಹಂಚುತ್ತಾರೆ.

'ನವ್ರೋಜ್'- ಇದು ಝೋರಾಸ್ಟ್ರಿಯನ್ ಕ್ಯಾರಲೆಂಡರ್‌ನ ಪ್ರಾರಂಭದ ದಿನ. ಪಾರ್ಸಿಗಳು ಮತ್ತು ಇರಾನಿಯರು ಈ ಕ್ಯಾಲೆಂಡರ್‌ ಆಧಾರದಲ್ಲಿ ಇರುವ ಕಾರಣ, ಹಿಂದೂಗಳು ಯುಗಾದಿಯನ್ನು ಆಚರಿಸಿದಂತೆ ಪಾರ್ಸಿಗಳು 'ನವ್ರೋಜ್' ದಿನದಂದು ಸಂಭ್ರಮಪಡುತ್ತಾರೆ.

'ಗುಡ್‌ಫ್ರೈಡೆ'- ಶುಕ್ರವಾರದ ಉಳಿದ ಹಬ್ಬಗಳು ಸಂತೋಷಾಚರಣೆಯಾದರೆ, 'ಗುಡ್‌ಫ್ರೈಡೇ' ಮಾತ್ರ ಶೋಕಾಚರಣೆ, ಪ್ರಭು ಏಸು ಕ್ರಿಸ್ತನನ್ನು ಶಿಲುಬೇರಿಸಿದ ಈ ದಿನದಂದು ಕ್ರೈಸ್ತರು ಶುಭ ಶುಕ್ರವಾರವೆಂದು ಆಚರಿಸುತ್ತಾರೆ. ಈ ದಿನ ಮುಂಜಾನೆ ಎಲ್ಲ ಕ್ರಿಶ್ಚಿಯನ್ನರು ಚರ್ಚ್‌ಗೆ ತೆರಳಿ ಪ್ರಾರ್ಥನೆ ಸಲ್ಲಿಸುತ್ತಾರೆ. ಜತೆಗೆ ಉಪವಾಸ ಮತ್ತು ಲಘು ಉಪಹಾರ ಸೇವನೆ 'ಗುಡ್‌ಫ್ರೈಡೆ'ಯ ವಿಶೇಷ.
ಮತ್ತಷ್ಟು
ದಿ,24ರಂದು ಶಿವಾನಿ ಭಟ್ನಾಗರ ಕೊಲೆ ತೀರ್ಪು
ಭ್ರಷ್ಟಾಚಾರ ತಡೆಗೆ ಸೂಕ್ತ ಕ್ರಮ -ಪಚೋರಿ
ನಕ್ಸಲ್ ಸಮಸ್ಯೆ ನಿಗ್ರಹ ಅಗತ್ಯ
ಸರಬ್ಜಿತನನ್ನು ಗಲ್ಲಿಗೇರಿಸಬಹುದು: ಪತ್ನಿ
ಅಡ್ವಾಣಿಯವರ ಮೈ ಕಂಟ್ರಿ ಮೈ ಲೈಫ್ ಬಿಡುಗಡೆ
ಗೋವಾದಲ್ಲಿ ಇಸ್ರೇಲಿ ಮಹಿಳೆಯ ನಿಗೂಢ ಸಾವು