ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪತಿ ಬದಲಿಗೆ ಉಗ್ರರ ಬಿಡುಗಡೆ ಅಗತ್ಯವಿಲ್ಲ-ಕೌರ್
ಅಮೃತ್‌‌ಸರ್: ಪಾಕಿಸ್ತಾನದಲ್ಲಿ ವಿಧ್ವಂಸಕ ಕೃತ್ಯ ನಡೆಸಿದ ಆರೋಪದ ಮೇಲೆ ಭಾರತದ ಸರಬ್‌‌ಜಿತ್ ಸಿಂಗ್ ಗಲ್ಲುಶಿಕ್ಷೆಗೆ ಗುರಿಯಾಗಿದ್ದು, ಇದೀಗ ಮ ರಣದಂಡನೆಯನ್ನು ಏಪ್ರಿಲ್ 30ಕ್ಕೆ ಮುಂದೂಡಿರುವುದಾಗಿ ಪಾಕ್ ಸರಕಾರ ಹೇಳಿಕೆ ನೀಡಿದ ಬೆನ್ನಲ್ಲೇ, ಪಾಕಿಸ್ತಾನದ ಉಗ್ರ ಭಯೋತ್ಪಾದಕರನ್ನು ಬಿಡುಗಡೆಗೊಳಿಸುವ ಮೂಲಕ ತನ್ನ ಗಂಡನ ಜೀವ ರಕ್ಷಿಸಬೇಕಾದ ಅಗತ್ಯ ಇಲ್ಲ ಎಂಬುದಾಗಿ ಸುಖ್‌‌ಪ್ರೀತ್ ಕೌರ್ ತಿಳಿಸಿದ್ದಾರೆ.

ಭಾರತದ ಜೈಲಿನಲ್ಲಿರುವ ಪಾಕಿಸ್ತಾನದ ಭಯೋತ್ಪಾದಕರನ್ನು ಬಿಡುಗಡೆಗೊಳಿಸುವ ಮೂಲಕ ತನ್ನ ಪತಿ ಸರಬ್‌‌ಜಿತ್ ಸಿಂಗ್ ಅವರನ್ನು ಬಿಡುಗಡೆಗೊ ಳಿಸುವುದನ್ನು ತಾನು ಹಾಗೂ ಮಗಳು ಯಾವತ್ತೂ ಇಷ್ಟಪಡುವುದಿಲ್ಲ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.

ತಾನು ತನ್ನ ತಾಯ್ನಾಡಿನ, ದೇಶಪ್ರೇಮವನ್ನು ಬಲಿಗೊಟ್ಟು ಪತಿಯನ್ನು ರಕ್ಷಿಸುವಂತಹ ಕೆಲಸವನ್ನು ತಾನು ಹಾಗೂ ಕುಟುಂಬದವರು ಇಷ್ಟಪಡುವುದಿಲ್ಲ ಎಂದು ಕೌರ್ ಮುಕ್ತ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಒಂದೆಡೆ ಸರಬ್‌ಜಿತ್ ಸಿಂಗ್‌‌ನನ್ನು ನೇಣುಗಂಬಕ್ಕೆ ಏರಿಸಬಾರದು ಎಂದು ಲೋಕಸಭೆಯಲ್ಲಿ ಪಕ್ಷಭೇದ ಮರೆತು ಸಂಸದರು ಆಗ್ರಹಿಸಿದ್ದರು. ಅಲ್ಲದೇ ಭಾರತ ಸರಕಾರ ಸಿಂಗ್ ಅವರನ್ನು ನೇಣುಗಂಬಕ್ಕೆ ಏರಿಸಬಾರದು ಎಂದು ಪಾಕ್‌‌ಗೆ ಮನವಿ ಸಲ್ಲಿಸಿತ್ತು.

ಸಿಂಗ್‌‌ಗೆ ಏಪ್ರಿಲ್ 1ರಂದು ಮರಣದಂಡನೆ ವಿಧಿಸಲಾಗುತ್ತದೆ ಎಂಬ ಸುದ್ದಿ ಬಿತ್ತರವಾಗುತ್ತಿದ್ದಂತೆಯೇ , ಸಹೋದರಿ ಅವರು ಪಾಕ್ ಸೇರಿದಂತೆ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿದ್ದರು.

ಏತನ್ಮಧ್ಯೆ ಪತ್ನಿ ಮತ್ತು ಮಗಳು ಸೇರಿದಂತೆ ಭಯೋತ್ಪಾದಕರ ಬಿಡುಗಡೆ ಮಾಡಿ,ತನ್ನ ಗಂಡನ ಪ್ರಾಣ ರಕ್ಷಿಸುವುದನ್ನು ತಾನು ಇಷ್ಟಪಡುವುದಿಲ್ಲ ಎಂಬ ಹೇಳಿಕೆ ನೀಡುವ ಮೂಲಕ ಪ್ರಕರಣವೀಗ ಕುತೂಹಲದ ಘಟ್ಟ ತಲುಪಿದೆ.
ಮತ್ತಷ್ಟು
ಸೋಹಾ ಅಲಿ ಮೇಲೆ ಶಸ್ತ್ರಾಸ್ತ್ರ ಪರವಾನಗಿ ಆರೋಪ
ಜಿನ್ನಾ ಹೇಳಿಕೆ, ವಿಷಾದವಿಲ್ಲ: ಅಡ್ವಾಣಿ
ಸರ್ವಧರ್ಮ ಸಮನ್ವಯತೆಯ ಭಾರತಕ್ಕೆ ಶುಭ ಶುಕ್ರವಾರ
ದಿ,24ರಂದು ಶಿವಾನಿ ಭಟ್ನಾಗರ ಕೊಲೆ ತೀರ್ಪು
ಭ್ರಷ್ಟಾಚಾರ ತಡೆಗೆ ಸೂಕ್ತ ಕ್ರಮ -ಪಚೋರಿ
ನಕ್ಸಲ್ ಸಮಸ್ಯೆ ನಿಗ್ರಹ ಅಗತ್ಯ