ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹೆಚ್ಚಿನ ಡ್ರಗ್ ಸೇವನೆ ಸ್ಕಾರ್ಲೆಟ್ ಸಾವಿಗೆ ನಾಂದಿ
ವಿದೇಶಿ ಯುವತಿ ಸ್ಕಾರ್ಲೆಟ್ ಕೀಲಿಂಗ್(15ವ)ಗಳ ಸಾವಿನ ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವ ಗೋವಾ ಪೊಲೀಸರು ಗುರುವಾರ ದಂದು ತನಿ ಖೆಯ ವರದಿಯನ್ನು ಬಹಿರಂಗಪಡಿಸಿದ್ದು, ಸ್ಕಾರ್ಲೆಟ್ ಅತೀಯಾದ ಡ್ರಗ್ ಸೇವನೆ ಮತ್ತು ಅತ್ಯಾಚಾರಕ್ಕೊಳಗಾಗಿ ಸಾವನ್ನಪ್ಪಿರುವುದಾಗಿ ಅಧಿಕಾರಿ ಗಳು ತಿಳಿಸಿದ್ದಾರೆ.

ಬ್ರಿಟಿಷ್ ಯುವತಿ ಸಾವಿನ ಕುರಿತು ಎದ್ದ ಊಹಾಪೋಹಾಗಳಿಗೆ,ಆಕೆಯ ದೇಹದ ಮರಣೋತ್ತರ ಪರೀಕ್ಷೆಯ ಮಹತ್ವದ ಅಂಶಗಳನ್ನು ಬಯಲುಗೊಳಿಸಿದೆ. ಸ್ಕಾರ್ಲೆಟ್ ಜೀವಕ್ಕೆ ಅಪಾಯಕಾರಿಯಾಗುವ ರೀತಿಯಲ್ಲಿ ಡ್ರಗ್ ಅನ್ನು ಕುಡಿದಿರುವುದು ಪೋಸ್ಟ್ ಮಾರ್ಟ್‌‌ಮ್ ಪರೀಕ್ಷೆಯಲ್ಲಿ ತಿಳಿದು ಬಂದಿದೆ.

ಆಕೆಯ ಜಠರದಲ್ಲಿ 92 ಹಾಗೂ 110ಮಿಲಿ ಗ್ರಾಂನಷ್ಟು ಕೊಕೈನ್ ಮತ್ತು ಮಾರ್ಪಿನ್ ಅನ್ನು ಸೇರಿಸಿ ಕುಡಿದ ಪರಿಣಾಮ ಅಸು ನೀಗಿರುವುದಾಗಿ ಅಧಿ ಕಾರಿಗಳು ವಿವರಿಸಿದ್ದಾರೆ. ಅತೀಯಾದ ಡ್ರಗ್ ಸೇವನೆ ಮತ್ತು ಲೈಂಗಿಕತೆಗೆ ಒಳಗಾಗಿ ಸ್ಕಾರ್ಲೆಟ್ ಸಾವಿಗೆ ಒಳಗಾಗಿದ್ದಾಳೆ ಎಂದು ವರದಿ ಬಹಿರಂಗ ಪಡಿಸಿದೆ.

ಸ್ಕಾರ್ಲೆಟ್ ಸಾವಿನ ವರದಿಯನ್ನು ಬುಧವಾರ ಸಂಜೆ ಮುಂಬೈ ಪೊಲೀಸರಿಗೆ ಹಸ್ತಾಂತರಿಸಿರುವುದಾಗಿ ತಿಳಿಸಿದ್ದು, ಮುಂಬೈ ತಂಡ ಗೋವಾಕ್ಕೆ ಆಗಮಿಸಿದ್ದು, ವರದಿಯನ್ನು ಪರಿಶೀಲಿಸುತ್ತಿರುವುದಾಗಿ ತಿಳಿಸಿದ್ದಾರೆ.

ಬ್ರಿಟಿಷ್ ಮೂಲದ ಕುಟುಂಬವೊಂದು ರಜೆಯಲ್ಲಿ ಗೋವಾಕ್ಕೆ ಆಗಮಿಸಿದ್ದು, ಫೆಬ್ರುವರಿ 18ರಂದು ಪ್ರಸಿದ್ದ ಅಂಜುವಾ ಬೀಚ್‌‌ನಲ್ಲಿ ಸ್ಕಾರ್ಲೆಟ್ ಕೀಲಿಂ ಗ್ ಸಾವಿಗೀಡಾಗಿದ್ದಳು, ಆದರೆ ಆಕೆಯದು ಸಾವಲ್ಲ, ಹತ್ಯೆ ಎಂಬುದಾಗಿ ಕುಟುಂಬದ ಸದಸ್ಯರು ಆರೋಪಿಸಿದ್ದರು.

ಎರಡನೇ ಬಾರಿಯ ಶವಪರೀಕ್ಷೆ ಸಂದರ್ಭ ಭಾಗಶಃ ಕೊಲೆಯ ಅಂಶಗಳು ಕಂಡುಬಂದಿರುವುದಾಗಿ ಅಧಿಕಾರಿಗಳು ತಿಳಿಸಿದ್ದರು. ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೆಂದೂ ಕೂಡ ಕುಟುಂಬ ವರ್ಗ ಆಗ್ರಹಿಸಿತ್ತು, ಆದರೆ ಈ ಪ್ರಕರಣದ ತನಿಖೆಗೆ ನಮ್ಮ ಇಲಾಖೆ ಸೂಕ್ತವಾಗಿದೆ ಎಂದು ಮುಖ್ಯಮಂತ್ರಿ ದಿಗಂಬರ್ ಕಾಮತ್ ತಿಳಿಸಿದ್ದರು.
ಮತ್ತಷ್ಟು
ಪತಿ ಬದಲಿಗೆ ಉಗ್ರರ ಬಿಡುಗಡೆ ಅಗತ್ಯವಿಲ್ಲ-ಕೌರ್
ಸೋಹಾ ಅಲಿ ಮೇಲೆ ಶಸ್ತ್ರಾಸ್ತ್ರ ಪರವಾನಗಿ ಆರೋಪ
ಜಿನ್ನಾ ಹೇಳಿಕೆ, ವಿಷಾದವಿಲ್ಲ: ಅಡ್ವಾಣಿ
ಸರ್ವಧರ್ಮ ಸಮನ್ವಯತೆಯ ಭಾರತಕ್ಕೆ ಶುಭ ಶುಕ್ರವಾರ
ದಿ,24ರಂದು ಶಿವಾನಿ ಭಟ್ನಾಗರ ಕೊಲೆ ತೀರ್ಪು
ಭ್ರಷ್ಟಾಚಾರ ತಡೆಗೆ ಸೂಕ್ತ ಕ್ರಮ -ಪಚೋರಿ