ಮಹಾರಾಷ್ಟ್ರದಲ್ಲಿ ಇತ್ತೀಚಿಗೆ ನಡೆಸಲಾದ ಆರ್ಥಿಕ ಸಮೀಕ್ಷೆಯ ಪ್ರಕಾರ ಮಹಾರಾಷ್ಟ್ರದ ಬಹುತೇಕ ನಗರ ಪ್ರದೇಶಕ್ಕೆ ವಲಸೆ ಬಂದಿರುವ ವರಲ್ಲಿ ಉತ್ತರ ಭಾರತೀಯರ ಸಂಖ್ಯೆ ತೀರಾ ಕಡಿಮೆ ಎಂದು ಗುರುವಾರದಂದು ತನ್ನ ವರದಿ ಸಲ್ಲಿಸಿದೆ. ಆದರೆ ವರದಿಯನ್ನು ರಾಜ್ ಠಾಕ್ರೆ ಹಾಸ್ಯಾಸ್ಪ ದವಾಗಿ ಪರಿಗಣಿಸಿದ್ದಾರೆ.
ನೀವು ಮಹಾರಾಷ್ಟ್ರಕ್ಕೆ ಬೇಕಾದರೆ ಬಂದು ಕಲಸಮಾಡಿ, ಆದರೆ ತಮ್ಮ ಕೆಲಸ ಮುಗಿದ ತಕ್ಷಣ ಮತ್ತೆ ತಮ್ಮ ಸ್ವಂತ ಸ್ಥಳಕ್ಕೆ ಹಿಂತಿರುಗಿರಿ ಎಂದು ಮ ಹಾರಾಷ್ಟ್ರ ನವನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆ ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಬೇರೆ ರಾಜ್ಯಗಳಿಂದ ಮಹಾರಾಷ್ಟ್ರಕ್ಕೆ ವಲಸೆ ಹೋಗುವವರ ಸಂಖ್ಯೆ ಕೇವಲ ಶೇ.32ರಷ್ಟು ಇದ್ದರೆ, ಮಹಾರಾಷ್ಟ್ರದವರೆ ಆದ ಇತರೇ ಜಿಲ್ಲೆಗಳಿಂದ ನಗರಕ್ಕೆ ವಲಸೆ ಹೋಗುವವರ ಸಂಖ್ಯೆ ಶೇ.42ರಷ್ಟು ಅಧಿಕ ಪ್ರಮಾಣದಲ್ಲಿದೆ ಎಂದು ಇತ್ತೀಚಿನ ಸಮೀಕ್ಷೆ ವರದಿ ಮಾಡಿದೆ.
ವಲಸೆ ಬಂದಿರುವವರ ವಾರ್ಷಿಕ ಆದಾಯವನ್ನು ಸಮೀಕ್ಷೆ ಮಾಡಿದ ಆರ್ಥಿಕ ಇಲಾಖೆಯು , ಗ್ರಾಮಾಂತರ ಪ್ರದೇಶಗಳಿಗೆ ವಲಸೆ ಹೋಗಿರುವವರ ವಾರ್ಷಿಕ ಆದಾಯ ರೂ.11,817 ಇದ್ದು, ನಗರ ಪ್ರದೇಶಕ್ಕೆ ವಲಸೆ ಹೋಗಿರುವವರ ವಾರ್ಷಿಕ ಆದಾಯ ರೂ. 38,144 ಸ್ವಲ್ಪ ಹೆಚ್ಚಿದೆ ಎಂದು ತಿಳಿಸಿದೆ. ಈ ಮೇಲ್ಕಂಡ ಆದಾಯವನ್ನು ಗಮನಿಸಿದರೆ ಇದು ವಲಸಿಗರ ಆದಾಯವೇ ಅಥವಾ ಮಹಾರಾಷ್ಟ್ರೀಯರ ಆದಾಯವೇ ಎಂಬ ಅನುಮಾನ ಬರುತ್ತದೆ. ಇದು ನಿಜವಾದಲ್ಲಿ ಬಿಹಾರ ಮತ್ತು ಉತ್ತರ ಪ್ರದೇಶ ಹೊರತು ಪಡಿಸಿ ಭಾರತದಲ್ಲಿ ಮುಂಬೈ ಬಡತನದಿಂದ ಕೂಡಿದ ಮೂರನೇ ದೊಡ್ಡ ರಾಜ್ಯವಾಗುತ್ತದೆ ಎಂದು ಪ್ರೊ.ರಾಮ್ ಕುಮಾರ್ ತಿಳಿಸಿದ್ದಾರೆ
|