ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹವಾಮಾನ ವೈಪರೀತ್ಯ ತಡೆಗೆ ಯೋಜನೆ
ಹವಾಮಾನ ವೈಪರೀತ್ಯವನ್ನು ತಡೆ ಗಟ್ಟಲು ಸರಕಾರ ಉನ್ನತ ಮಟ್ಟದ ರಾಷ್ಟ್ರೀಯ ಯೋಜನೆಯನ್ನು ರೂಪಿಸುತ್ತಿದ್ದು, ಈ ಯೋಜನೆ ಯಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಆಹಾರ ಧಾನ್ಯಗಳ ಮೇಲೆ ಉಂಟಾಗಬಹುದಾದ ಪರಿಣಾವನ್ನು ತಡೆಗಟ್ಟುಲು ಸೂಕ್ತ ಕ್ರಮ ಕೂಡ ಸೂಚಿಸಲಾಗಿದೆ.

ಹೆಸರಾಂತ ವಿಜ್ಞಾನಿ ಮತ್ತು ರಾಜ್ಯಸಭಾ ಸದಸ್ಯ ಎಸ್. ಸ್ವಾಮಿನಾಥ್ ಅವರು ಹವಾಮಾನ ವೈಪರೀತ್ಯದ ಬಗ್ಗೆ ಗುರುವಾರದಂದು ಸದನದಲ್ಲಿ ತೀವ್ರ ಕಳವಳ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ತಮ್ಮ ಸರಕಾರಕ್ಕೆ ಇದರ ಬಗ್ಗೆ ಅರಿವಿದೆ ಎಂದು ಪ್ರಧಾನಿ ಮನಮೋಹನ್ ಸಿಂಗ್ ತಿಳಿಸಿದರು.

ಹವಾಮಾನ ವೈಪರೀತ್ಯವನ್ನು ತಡೆಗಟ್ಟಲ್ಲು ಸರಕಾರ ರಾಷ್ಟ್ರೀಯ ಯೋಜನೆಯನ್ನು ರೂಪಿಸುವ ಕಾರ್ಯದಲ್ಲಿದೆ, ಈ ಯೋಜನೆಯು ಹವಾಮಾನ ವೈ ಪರೀತ್ಯದಿಂದ ಪರಿಸದಲ್ಲಿ ಉಂಟಾಗುವ ಬದಲಾವಣೆಯನ್ನು ತಗ್ಗಿಸಲು ಸೂಕ್ತ ಕ್ರಮವನ್ನು ಸೂಚಿಸಲಾಗಿದೆ ಎಂದು ಅವರು ಹೇಳಿದರು. ಈ ವಿಚಾ ರವಾಗಿ ಕಳೆದೆರಡು ದಿನಗಳ ಹಿಂದೆಯಷ್ಟೆ ಸಂಬಂಧಪಟ್ಟ ಇಲಾಖೆಯ ಜೊತೆ ಚರ್ಚಿಸಲಾಗಿದೆ ಎಂದು ಪ್ರಧಾನಿ ತಿಳಿಸಿದರು.

ಸರಕಾರ ಹವಾಮಾನ ವೈಪರೀತ್ಯದಿಂದ ಆಲೂಗಡ್ಡೆ ಮತ್ತು ಜೋಳ ಬೆಳೆಗಳ ಮೇಲೆ ಉಂಟಾಗುವ ಪರಿಣಾಮವನ್ನು ತಡೆಗಟ್ಟುವಲ್ಲಿ ಈ ರೀತಿ ಅನಿ ರೀಕ್ಷಿತ ಯೋಜನೆ ರೂಪಿಸುತ್ತಿದೆಯೋ ಎಂಬ ಸ್ವಾಮಿನಾಥನ್‌ರ ಪ್ರಶ್ನೆಗೆ ಸರಕಾರಕ್ಕೆ ಈ ತರಹದ ಯಾವುದೇ ಅನಿರೀಕ್ಷಿತ ಯೋಜನೆ ರಚಿಸುವ ಅಗತ್ಯವಿಲ್ಲ, ಬದಲಾಗಿ ಈ ಎರಡೂ ಬೆಳೆಗಳೂ ಪಕ್ಷೀ ಆಹಾರ ಮತ್ತು ಇಥೆನಾಲ್ ತಯಾರಿಸುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಧಾನಿ ಉತ್ತರಿಸಿದರು.

ಈದೇ ಸಂದರ್ಭದಲ್ಲಿ ಮಾತನಾಡಿದ ಪರಿಸರ ಸಚಿವ ಎನ್.ಎನ್.ಮೆನನ್ ಅವರು ಪ್ರಧಾನ ಮಂತ್ರಿ ಮಂಡಳದ ಮಾರ್ಗದರ್ಶನದಲ್ಲಿ ತಜ್ಞರ ಸಮಿತಿ ಯೊಂದು ಇದರ ಬಗ್ಗೆ ವರದಿಯನ್ನು ತಯಾರಿಸುತ್ತಿದ್ದು ,ಜೂನ್ ತಿಂಗಳ ಒಳಗೆ ತನ್ನ ವರದಿ ಸಲ್ಲಿಸಲಿದೆ ಎಂದು ತಿಳಿಸಿದರು.

ಹವಾಮಾನ ವೈಪರೀತ್ಯದಿಂದ ಆಹಾರ ಧಾನ್ಯಗಳ ಉತ್ಪಾದನೆ ಮೇಲೆ ಉಂಟಾಗುವ ಪರಿಣಾವನ್ನು ತಡೆಗಟ್ಟಲು ಕೃಷಿ ಇಲಾಖೆ ಮತ್ತು ಯೋಜನಾ ಆಯೋಗಕ್ಕೆ ಕ್ರಮಬದ್ದವಾದ ಯೋಜನೆಯನ್ನು ರೂಪಿಸಲು ಪ್ರಧಾನಿ ಆದೇಶ ನೀಡಿದ್ದಾರೆ ಎಂದು ಮೆನನ್ ತಿಳಿಸಿದರು.
ಮತ್ತಷ್ಟು
ವಲಸಿಗರ ಸಂಖ್ಯೆಯಲ್ಲಿ ಇಳಿಕೆ ಹಾಸ್ಯಾಸ್ಪದ-ಠಾಕ್ರೆ
ಹೆಚ್ಚಿನ ಡ್ರಗ್ ಸೇವನೆ ಸ್ಕಾರ್ಲೆಟ್ ಸಾವಿಗೆ ನಾಂದಿ
ಪತಿ ಬದಲಿಗೆ ಉಗ್ರರ ಬಿಡುಗಡೆ ಅಗತ್ಯವಿಲ್ಲ-ಕೌರ್
ಸೋಹಾ ಅಲಿ ಮೇಲೆ ಶಸ್ತ್ರಾಸ್ತ್ರ ಪರವಾನಗಿ ಆರೋಪ
ಜಿನ್ನಾ ಹೇಳಿಕೆ, ವಿಷಾದವಿಲ್ಲ: ಅಡ್ವಾಣಿ
ಸರ್ವಧರ್ಮ ಸಮನ್ವಯತೆಯ ಭಾರತಕ್ಕೆ ಶುಭ ಶುಕ್ರವಾರ