ಭಾರತ-ಅಮೆರಿಕ ಪರಮಾಣು ಒಪ್ಪಂದ ವಿಷಯವಾಗಿ ಎಡಪಕ್ಷ ಮತ್ತೊಮ್ಮೆ ಕೇಂದ್ರ ಸರಕಾರದ ಮೇಲೆ ತೀವ್ರತರದ ವಾಗ್ದಾಳಿ ನಡೆಸಿ ತರಾಟೆಗೆ ತೆಗೆದುಕೊಂಡಿದೆ.
ಪರಮಾಣು ಒಪ್ಪಂದದತ್ತ ಮುನ್ನುಗ್ಗುವ ಸರಕಾರದ ಪ್ರಯತ್ನ ಯುಪಿಎ ಮತ್ತು ಅದರ ಮಿತ್ರ ಪಕ್ಷಗಳು ಒಪ್ಪಿಕೊಂಡಿದ್ದ ಸಾಮಾನ್ಯ ಕನಿಷ್ಠ ಕಾರ್ಯಕ್ರಮ (ಸಿಎಂಪಿ)ದ ಉದ್ದೇಶ ಪೂರ್ವಕ ಉಲ್ಲಂಘನೆಯಾಗಿದೆ ಎಂದು ಎಡಪಕ್ಷ ವಾದಿಸಿದೆ.
ಹೈದರಾಬಾದಿನಲ್ಲಿ ಇಂದು ಪ್ರಾರಂಭವಾದ ಸಿಪಿಐ ಪಕ್ಷದ ಮಹಾಸಭೆಯಲ್ಲಿ ಮಾತನಾಡುತ್ತಿದ್ದ ಎಬಿ ಬರ್ದನ್, ಸ್ವತಂತ್ರ ವಿದೇಶಿ ನೀತಿ ಅನುಕರಿಸುವಾಗಿನ ಯುಪಿಎಯ ಪ್ರತಿಜ್ಞೆಗೆ ಪರಮಾಣು ಒಪ್ಪಂದ ವಿರುದ್ಧವಾಗಿದೆ ಎಂದು ತಿಳಿಸಿದರು.
ತಾವು ಕೋಮುವಾದಿ ಪಕ್ಷಗಳನ್ನು ಅಧಿಕಾರದಿಂದ ದೂರವಿರಿಸಲು ಯುಪಿಎಗೆ ಬೆಂಬಲ ಸೂಚಿಸಿದೆವು ಆದರೆ ಇತ್ತೀಚಿಗಿನ ದಿನಗಳಲ್ಲಿ ಬಿಜೆಪಿ ಚುನಾವಣೆಯಲ್ಲಿ ಗೆಲವು ಸಾಧಿಸುತ್ತಿದೆ. ಇದಕ್ಕೆ ಕಾರಣ ಯುಪಿಎ ಸರಕಾರದ ಬೆಲೆ ನಿಯಂತ್ರಿಸುವಲ್ಲಿನ ವಿಫಲತೆ ಎಂದು ಸಿಬಿಐ ನಾಯಕ ಡಿ. ರಾಜಾ ಹೇಳಿದ್ದಾರೆ.
ಈ ಮಾಹಾಸಭೆಯಲ್ಲಿ ಪಕ್ಷ ಕಾರ್ಯಕಾರಿಣಿ ಸದಸ್ಯರ ಹೊಸ ಗುಂಪನ್ನು ಚುನಾಯಿಸುತ್ತದೆ ಮತ್ತು ತನ್ನ ರಾಜಕೀಯದ ಮುಂದಿನ ದಿಶೆಯನ್ನು ನಿರ್ಧರಿಸುತ್ತದೆ. ಆದರೆ ಈ ಬಾರಿಯ ಮಹಾಸಭೆಯಲ್ಲಿ ಹೆಚ್ಚಿನ ಗಮನ ಯುಪಿಎ ಜತೆಗಿನ ತನ್ನ ಸಂಬಂಧದ ಬಗ್ಗೆ ಕೇಂದ್ರೀಕೃತವಾಗಿರುವುದು.
|