ಹತ್ಯೆಗೀಡಾದ ಬ್ರಿಟೀಷ್ ಯುವತಿ ಸ್ಕಾರ್ಲೆಟ್ ಕೀಲಿಂಗ್‌ಗೆ ಸಂಬಂಧಿಸಿದಂತೆ ಗೋವಾ ವೈದ್ಯಕೀಯ ಕಾಲೇಜಿನ ಪೋರೆನ್ಸಿಕ್ ಇಲಾಖೆಯ ಮುಖ್ಯಸ್ಥರು ಪೊಲೀಸರಿಗೆ ನೂತನ ವರದಿಯನ್ನು ಕಳುಹಿಸಿದ್ದು, ಈ ಪ್ರಕರಣ ಈಗ ಹೊಸದೊಂದು ತಿರುವು ಪಡೆದಿದೆ.
ನೂತನ ವರದಿಯ ಪ್ರಕಾರ ಸ್ಕಾರ್ಲೆಟ್ ದೇಹದಲ್ಲಿನ ಇಥಿಲ್ ಅಲ್ಕೋಹಾಲ್ ಮತ್ತು ಮಾದಕ ದ್ರವ್ಯದ ಪ್ರಮಾಣ ಅವರ ಸಾವಿಗೆ ಕಾರಣವಾಗುವಷ್ಟು ಇರಲಿಲ್ಲ.
ಆಳವಾದ ನೀರಿನಲ್ಲಿ ಮುಳುಗಿಸಿದ ಕಾರಣ ಸ್ಕಾರ್ಲೆಟ್ ಸಾವಿಗೀಡಾಗಿದ್ದಾರೆ ಎಂದು ಅವರು ತಮ್ಮ ವರದಿಯಲ್ಲಿ ತಿಳಿಸಿದ್ದಾರೆ. ಇದರಿಂದ ಈ ಪ್ರಕರಣ ಹೊಸ ತಿರುವು ಪಡೆದಿದೆ.
ಕೆಲವು ದಿನಗಳ ಹಿಂದೆ ಹೊರಬಿದ್ದ ಸ್ಕಾರ್ಲೆಟ್ ದೇಹ ಪರೀಕ್ಷೆಯ ವರದಿಯಂತೆ ಅವರ ದೇಹದಲ್ಲಿ ಮಾದಕ ದ್ರವ್ಯದ ಅಂಶ ಮಾರಣಾಂತಿಕ ಮಿತಿಯ ಎರಡು ಪಟ್ಟು ಇತ್ತು ಮತ್ತು ಅದೇ ಪ್ರಮಾಣದ ಅಲ್ಕೋಹಾಲ್ ಅಂಶನೂ ಕಂಡು ಬಂತು ಎಂದು ತಿಳಿಸಿತ್ತು.
|