ಬ್ರಿಟಿಷ್ ಯುವತಿ ಸ್ಕಾರ್ಲೆಟ್ ಅವಳ ಸಾವು ಮಾದಕ ಸೇವನೆಯಿಂದ ಆಗಿಲ್ಲ. ಅವಳನ್ನು ಕೊಲೆ ಮಾಡಲಾಗಿದೆ ಎಂಬ ವಿಧಿ ವಿಜ್ಞಾನ ತನಿಖಾ ವರದಿಯ ಸತ್ಯಾಸತ್ಯತೆಯನ್ನು ಗೋವಾ ಪೊಲೀಸರು ಪ್ರಶ್ನಿಸಿದ್ದರು. ವರದಿ ನೀಡಿರುವ ವೈದ್ಯರು ಪ್ರತ್ಯಕ್ಷ ಸಾಕ್ಷಿ ಹೇಳಿದ ರೀತಿಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯ ವಿರುದ್ಧ ಅಕ್ಷೇಪ ವ್ಯಕ್ತಪಡಿಸಿರು ಗೋವಾ ಪೊಲೀಸ್ ಮಹಾ ನಿರ್ದೇಶಕ ಕಿಶನ್ ಕುಮಾರ್ ಅವರು ಇದು ವಿಧಿ ವಿಜ್ಞಾನ ವೈದ್ಯರ ವರದಿಯೋ ಅಥವಾ ಪ್ರತ್ಯಕ್ಷ ಸಾಕ್ಷಿಯ ವರದಿಯೋ ಎಂದು ಕೇಳಿದ್ದಾರೆ.
ಸ್ಕಾರ್ಲೆಟ್ ಕಿಲಿಂಗ್‌ಳ ಮುಖವನ್ನು ಕನಿಷ್ಠ ಐದರಿಂದ ಹತ್ತು ನಿಮಿಷಗಳ ಕಾಲ ನಿರಿನಲ್ಲಿ ಒತ್ತಿ ಹಿಡಿಯಲಾಗಿದೆ. ಅವಳ ಬಾಯಿ ಮೂಗಿನಿಂದ ನೀರು ದೇಹದ ಒಳಗೆ ಸೇರಿ ಸಾವು ಸಂಭವಿಸಿದೆ. ಸ್ಕಾರ್ಲೆಟ್ ದೇಹದಲ್ಲಿ ಇದ್ದು ಆಲ್ಕೊಹಾಲ್ ಅಂಶವು ಅವಳನ್ನು ನಿಶ್ಚಲ ಸ್ಥಿತಿಗೆ ಇಲ್ಲವೇ ಸಾವು ಸಂಭವಿಸುವ ಪ್ರಮಾಣದಲ್ಲಿ ಇರಲಿಲ್ಲ ಎಂದು ವರದಿ ಹೇಳಿದೆ.
ಸ್ಕಾರ್ಲೆಟ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಗೊಂದಲ ಪೊಲೀಸ್ ಇಲಾಖೆಯಲ್ಲಿ ಇಲ್ಲ ಎಂದು ಹೇಳಿರುವ ಅವರು ವಿಧಿ ವಿಜ್ಞಾನ ವೈದ್ಯ ಡಾ. ಸಿಲ್ವಾನೊ ಸಾಪೆಕೊ ನೀಡಿರುವ ಅಂತಿಮ ವರದಿ ಸಂಶಯಾಸ್ಪದವಾಗಿದೆ. ಸ್ಕಾರ್ಲೆಟ್ ಸಾವು ಸಂಭವಿಸಿದ ನಂತರ ಮೊದಲ ಬಾರಿಗೆ ಶವ ಪರೀಕ್ಷೆಯನ್ನು ನಡೆಸಿದ್ದು ಡಾ. ಸಿಲ್ವಾನೊ ಆ ವರದಿಯಲ್ಲಿ ಸ್ಕಾರ್ಲೆಟ್ ಸಾವು ಕೊಲೆಯಿಂದ ಆಗಿಲ್ಲ ಎಂದು ಹೇಳಲಾಗಿತ್ತು. ಎರಡನೆ ಶವ ಪರೀಕ್ಷೆಯಲ್ಲಿ ಸ್ಕಾರ್ಲೆಟ್ ಸಾವನ್ನು ಕೊಲೆ ಎಂದು ತನಿಖೆ ಮಾಡಬೇಕು ಎಂದು ಹೇಳಲಾಗಿತ್ತು.
|