ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಾಲ್ವರು ಉತ್ತರ ಭಾರತೀಯರ ಮೇಲೆ ಹಲ್ಲೆ
ಮಹಾರಾಷ್ಟ್ರ ನವನಿರ್ಮಾಣ ವೇದಿಕೆಯ ಕಾರ್ಯಕರ್ತರು ಎನ್ನಲಾದ ಗುಂಪೊಂದು ಮುಂಬೈಯ ಸಾಂಟಾಕ್ರೂಜ್ ಜುಹು ಬಳಿ ನಾಲ್ವರು ಉತ್ತರ ಭಾರತೀಯ ನಾಗರಿಕರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ವರದಿಯಾಗಿದೆ.

ಮಹಾರಾಷ್ಟ್ರ ನವನಿರ್ಮಾಣ ವೇದಿಕೆಯ ಮುಖ್ಯಸ್ಥ ರಾಜ್ ಠಾಕ್ರೆಯವರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಕೂಡದು ಎಂದು ಪೊಲೀಸರು ನಿರ್ದೇಶನ ನೀಡಿದ ನಂತರ ಮೊದಲ ಬಾರಿಗೆ ಉತ್ತರ ಭಾರತೀಯ ಮೂಲದವರ ಮೇಲೆ ಹಲ್ಲೆ ಎಸಗಲಾಗಿದೆ. ಮುಂಬೈನಲ್ಲಿ ಸೋಮವಾರ ಮಹಾರಾಷ್ಟ್ರ ನವನಿರ್ಮಾಣ ವೇದಿಕೆಯ ಬೃಹತ್ ಸಾರ್ವಜನಿಕ ರಾಲಿಯನ್ನು ಆಯೋಜಿಸಲಾಗಿದ್ದು ಅದಕ್ಕೂ ಮುನ್ನ ಹಲ್ಲೆ ಸಂಭವಿಸಿದೆ.

ಪೊಲೀಸರಿಗೆ ನೀಡಲಾಗಿರುವ ದೂರಿನ ಪ್ರಕಾರ ಎಂಟರಿಂದ ಹತ್ತು ಜನರು ಇರುವ ಗುಂಪು ಸಾಂತಾ ಕ್ರೂಜ ಜಹು ಕೊಕ್ಲಿವಾಡಾ ಬಳಿ ಬರುತ್ತಿದ್ದ ನಾಲ್ವರು ಬಿಹಾರಿಗಳನ್ನು ಕಟ್ಟಿಗೆ ಮತ್ತಿತರ ಆಯುಧಗಳಿಂದ ಹೊಡೆದು ಥಳಿಸಿದ್ದಾರೆ.

ಉತ್ತರ ಭಾರತೀಯ ಮೂಲದವರನ್ನು ಗುರಿಯಾಗಿರಿಸಿಕೊಂಡು ರಾಜ್ ಠಾಕ್ರೆ ಒಂದು ತಿಂಗಳ ಹಿಂದೆ ಪ್ರಚೋಧನಕಾರಿ ಹೇಳಿಕೆ ನೀಡಿದ ನಂತರ ಈ ಘಟನೆ ಸಂಭವಿಸಿದೆ. ಮಹಾರಾಷ್ಟ್ರ ನವನಿರ್ಮಾಣ ವೇದಿಕೆಯು ಛತ್ರಪತಿ ಶಿವಾಜಿ ಜಯಂತಿಯನ್ನು ಆಚರಿಸುವದಕ್ಕೆ ಬೃಹತ್ ಸಾರ್ವಜನಿಕ ಸಮಾರಂಭವನ್ನು ಆಯೋಜಿಸಿದ್ದು ಸಮಾಂಭದಲ್ಲಿ ರಾಜ್ ಠಾಕ್ರೆ ಮಾತನಾಡಲಿದ್ದಾರೆ ಅಥವಾ ಇಲ್ಲ ಎನ್ನುವುದು ಇನ್ನೂ ಖಚಿತವಾಗಿಲ್ಲ. ಕಳೆದ ತಿಂಗಳು ಸಂಭವಿಸಿದ ಹಿಂಸಾಚಾರದ ನಂತರ ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುವಂತಿಲ್ಲ ಎಂದು ಮುಂಬೈ ಪೊಲೀಸರು ಪ್ರತಿಬಂಧಕಾಜ್ಞೆಯನ್ನು ಹೊರಡಿಸಿದ್ದಾರೆ.
ಮತ್ತಷ್ಟು
ಸ್ಕಾರ್ಲೆಟ್ ಕೊಲೆ ಪ್ರಕರಣದ ಸುತ್ತ ಸಂಶಯದ ಹುತ್ತ
ದಕ್ಷಿಣ ಗೋವಾಗೆ ತೆರಳಿದ ಫಿಯೋನಾ
ಸ್ಕಾರ್ಲೆಟ್ ಕೊಲೆ ವರದಿ ಬಹಿರಂಗ
ಅಣು ಒಪ್ಪಂದ:ಎಡಪಕ್ಷಗಳಿಂದ ತರಾಟೆ
ಇಂದಿರಾ ವಿರುದ್ಧ ತೀರ್ಪು ನೀಡಿದ ನ್ಯಾಯಾಧೀಶ ವಿಧಿವಶ
ಕುಖ್ಯಾತಿಯ ಹೆಸರು ಕಳೆದುಕೊಳ್ಳುವತ್ತ ಧಾರಾವಿ