ಮಹಾರಾಷ್ಟ್ರ ನವನಿರ್ಮಾಣ ಸೇನೆಯ ನಾಯಕ ರಾಜ್ ಠಾಕ್ರೆ ಶಿವಾಜಿ ಜಯಂತಿ ನಿಮಿತ್ಯ ಆಯೋಜಿಸದ ಸಭೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ರಾಜ್ ಠಾಕ್ರೆ ಹೊರರಾಜ್ಯದ ಜನತೆಯ ಬಗ್ಗೆ ಸಾರ್ವಜನಿಕ ಸಭೆಯಲ್ಲಿ ಭಾಷಣವನ್ನು ಮಾಡದಂತೆ ನ್ಯಾಯಾಲಯ ಹೇರಿದ ನಿಷೇಧ ಮುಕ್ತಾಯವಾಗಿ ಮೂರು ವಾರಗಳು ಸಂದ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮದಲ್ಲಿ ರಾಜ್ ಠಾಕ್ರೆ ಭಾಷಣ ಮಾಡಲಿದ್ದಾರೆ ಎಂದು ಪಕ್ಷದ ವಕ್ತಾರರು ತಿಳಿಸಿದ್ದಾರೆ.
ಮಹಾರಾಷ್ಟ್ರ ನವನಿರ್ಮಾಣ ಸೇನೆ ಶಿವಸೇನೆಯ ಸಾಂಪ್ರದಾಯಕ ಸ್ಥಳವಾದ ಸೆಂಟ್ರಲ್ ಮುಂಬೈನಲ್ಲಿರುವ ಶಿವಾಜಿ ಪಾರ್ಕ್‌ನಲ್ಲಿ ಸಭೆಯನ್ನು ಆಯೋಜಿಸಿದೆ.
ಕಳೆದ ಕೆಲ ತಿಂಗಳುಗಳಿಂದ ಮೂಲವಾದ ಶಿವಸೇನೆಯಿಂದ ಹೊರಬಂದು ಮಹಾರಾಷ್ಟ್ರದಲ್ಲಿರುವ ಹೊರರಾಜ್ಯದವರ ಬಗ್ಗೆ ರಾಜ್ ಠಾಕ್ರೆ ಹೇಳಿಕೆ ನೀಡಿದ ಹಿನ್ನಲೆಯಲ್ಲಿ ಮುಂಬೈ ಹಿಂಸಾಚಾರದ ಘಟನೆಗಳನ್ನು ಎದುರಿಸುವಂತಾಗಿತ್ತು.
|