ನ್ಯಾಯಮೂರ್ತಿ ಬಿ. ಎನ್ ಶ್ರೀಕೃಷ್ಣ ನೇತೃತ್ವದ ಆರನೇ ವೇತನ ಆಯೋಗವು ಹಣಕಾಸು ಸಚಿವ ಪಿ. ಚಿದಂಬರಮ್ ಅವರಿಗೆ ಸಲ್ಲಿಸಿದ ವರದಿಯಲ್ಲಿ ಕೇಂದ್ರ ಸರಕಾರಿ ನೌಕರರಿಗೆ ಶೇ 40 ರಷ್ಟು ವೇತನದಲ್ಲಿ ಹೆಚ್ಚಳ ಮಾಡಬೇಕು ಎಂದು ಶಿಫಾರಸ್ಸು ಮಾಡಿದೆ.
ಆರನೇ ವೇತನ ಆಯೋಗ ಮಾಡಿರುವ ಶಿಫಾರಸ್ಸುಗಳನ್ನು ಸರಕಾರ ಜಾರಿಗೆ ತಂದಲ್ಲಿ ನಾಲ್ಕು ದಶಲಕ್ಷ ಕೇಂದ್ರ ಸರಕಾರಿ ನೌಕರರಿಗೆ ಅನ್ವಯವಾಗಲಿದೆ.
ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಮ್ ಅವರು 2008-09ರ ಹಣಕಾಸು ವರ್ಷದ ಮುಂಗಡ ಪತ್ರದಲ್ಲಿ ವೇತನ ಏರಿಕೆಗೆ ಯಾವುದೇ ಅನುದಾನ ಮೀಸಲಿಟ್ಟಿಲ್ಲ ಆದರೂ ವೇತನ ಆಯೋಗದ ಶಿಫಾರಸ್ಸು ಜಾರಿ ಮಾಡಲು ಅವಕಾಶ ಇದೆ ಎಂದು ಹೇಳಿದ್ದಾರೆ. ತುಟ್ಟಿ ಭತ್ಯೆಯ ಶೇ 50ರಷ್ಟನ್ನು ಮೂಲ ವೇತನದಲ್ಲಿ ಸಮ್ಮಿಳಿತಗೊಳಿಸಲು ಕೇಂದ್ರ ಸರಕಾರ ತೀರ್ಮಾನಿಸಿದ್ದು ಪರಿಣಾಮವಾಗಿ ಉದ್ಯೋಗಿಗಳ ವೇತನದಲ್ಲಿ ಗಮನಾರ್ಹ ಎರಿಕೆಯಾಗಲಿದೆ
|