ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶಿವಾನಿ ಕೊಲೆ ಪ್ರಕರಣ: ಶರ್ಮಾಗೆ ಜೀವಾವಧಿ ಶಿಕ್ಷೆ
ಜೀವನ ಅನ್ನುವುದು ರವಿಕಾಂತ್ ಶರ್ಮಾನ ಪಾಲಿಗೆ ಸರಿಯಾಗಿ ಒಂದು ಸುತ್ತು ತಿರುಗಿದೆ. ಕಾನೂನಿನ ರಕ್ಷಕನಾಗಿದ್ದ ರವಿಕಾಂತ್ ಶರ್ಮಾ ಇಂದು ಕಾನೂನು ಭಕ್ಷಕನಾಗಿ ನ್ಯಾಯಾಲಯದ ಕಟಕಟೆಯಲ್ಲಿ ನಿಂತು ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾನೆ. ಭಾರತದ ಆಡಳಿತಾತ್ಮಕ ಇತಿಹಾಸದಲ್ಲಿ ಕೊಲೆ ಪ್ರಕರಣವೊಂದರಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾದ ಮೊದಲ ಪೊಲೀಸ್ ಅಧಿಕಾರಿ ಈತ.

ಇಂಡಿಯನ್ ಎಕ್ಸ್‌ಪ್ರೆಸ್‌ನ ತನಿಖಾ ವರದಿಗಾರ್ತಿಯಾಗಿದ್ದ ಶಿವಾನಿ ಭಟ್ನಾಗರ್ ಕೊಲೆಯಾಗಿ 9 ವರ್ಷಗಳು ಸಂದ ಬಳಿಕ ದೆಹಲಿಯಲ್ಲಿನ ತ್ವರಿತ ನ್ಯಾಯಾಲಯವು ಅಮಾನತ್ತುಗೊಂಡಿರುವ ಮಾಜಿ ಹರಿಯಾಣ ಐಜಿಪಿ ರವಿಕಾಂತ್ ಶರ್ಮಾ ಸೇರಿದಂತೆ ಇತರ ಮೂವರನ್ನು ಕೊಲೆ, ಅಫರಾಧಿಕ ಸಂಚು, ಮತ್ತು ಸಾಕ್ಷ್ಯ ನಾಶದ ಆರೋಪದಡಿಯಲ್ಲಿ ಆಪಾದಿತರು ಎಂದು ತೀರ್ಪಿತ್ತು ಶಿಕ್ಷೆ ವಿಧಿಸಿದೆ.

ನ್ಯಾಯಮೂರ್ತಿ ರಾಜೇಂದ್ರ ಶಾಸ್ತ್ರಿ ಅವರನ್ನು ಒಳಗೊಂಡ ಏಕ ಸದಸ್ಯ ನ್ಯಾಯಪೀಠವು ರವಿಕಾಂತ ಶರ್ಮಾ ಮತ್ತು ಇತರ ಮೂವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸುವುದರ ಜೊತೆಗೆ ಪ್ರಕರಣದ ಪ್ರಮುಖ ಆರೋಪಿ ಶರ್ಮಾಗೆ 20 ಸಾವಿರ ಮತ್ತು ಇತರ ಮೂವರು ಅಪರಾಧಿಗಳು ತಲಾ ಹತ್ತು ಸಾವಿರ ರೂಗಳನ್ನು ದಂಡ ರೂಪದಲ್ಲಿ ತೆರಬೇಕು ಎಂದು ಆದೇಶಿಸಿತು.

1999ರಲ್ಲಿ ಸಂಭವಿಸಿದ ಪತ್ರಕರ್ತೆಯ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಆರ್ ಕೆ ಶರ್ಮಾಗೆ ಮರಣ ದಂಡನೆ ಶಿಕ್ಷೆಯನ್ನು ವಿಧಿಸಲು ನ್ಯಾಯಾಲಯ ನಿರಾಕರಿಸಿದೆ. ಪ್ರಕರಣದ ಆರೋಪಿಯಾಗಿರುವ ಶರ್ಮಾ ಈ ಹಿಂದೆ ಅಪರಾಧಿಕ ಹಿನ್ನಲೆ ಹೊಂದಿಲ್ಲ ಮತ್ತು ಈ ಕೊಲೆ ವಿರಳಾತಿ ವಿರಳ ಪ್ರಕರಣ ಅಲ್ಲ ಎಂದು ಹೇಳಿ ಜೀವಾವಧಿ ಶಿಕ್ಷೆ ಮಾತ್ರ ವಿಧಿಸಿತು.

ಶರ್ಮಾ ಪರ ವಾದಿಸಿದ ನ್ಯಾಯವಾದಿ ಡಿ.ಬಿ ಗೋಸ್ವಾಮಿ ಅವರು ಆರ್ ಕೆ ಶರ್ಮಾ ಮಾಡಿದ ಕೊಲೆ, ಹೇಯ ಕೊಲೆಗಳ ಸಾಲಿನಲ್ಲಿ ಸೇರುವುದಿಲ್ಲ ಆದ್ದರಿಂದ ಮರಣ ದಂಡನೆ ಶಿಕ್ಷೆ ವಿಧಿಸಬಾರದು ಎಂದು ಕೇಳಿಕೊಂಡ ಕಾರಣ ನ್ಯಾಯಾಧೀಶರು ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ ಎಂದು ಹೇಳಿದ್ದಾರೆ.

ಇದೇ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸ್ಥಾನದಲ್ಲಿದ್ದ ವೇದಪ್ರಕಾಶ್ ಶರ್ಮಾ ಮತ್ತು ವೇದ್ ಅಲಿಯಾಸ್ ಕಾಲೂನನ್ನು ಆರೋಪದಿಂದ ಮುಕ್ತ ಮಾಡಿದೆ. ಈರ್ವರು ನವಕುಂಜ್ ಅಪಾರ್ಟಮೆಂಟಿನಲ್ಲಿರುವ ಶಿವಾನಿ ಭಟ್ನಾಗರ್ ನಿವಾಸದ ಮೇಲೆ ನಿಗಾ ಇಟ್ಟು ಬಾಡಿಗೆ ಹಂತಕ ಪ್ರದೀಪ್ ಶರ್ಮಾಗೆ ಕೊಲೆ ಮಾಡುವುದಕ್ಕೆ ಸೂಚನೆ ನೀಡಲು ಅಪರಾಧಿಗಳು ನಿಯೋಜಿಸಿದ್ದರು.
ಮತ್ತಷ್ಟು
ಕೇಂ, ಸರಕಾರಿ ನೌಕರರ ವೇತನ ಶೇ 40ರಷ್ಟು ಹೆಚ್ಚಳ
ಶಿವಾಜಿ ಜಯಂತಿ ನಿಮಿತ್ಯ ರಾಜ್ ಠಾಕ್ರೆ ಭಾಷಣ
ಅಣುಶಕ್ತಿ ಬಳಕೆಗೆ ಹಿಂಜರಿಕೆ ಇಲ್ಲ-ಪ್ರಧಾನಿ
ನಾಲ್ವರು ಉತ್ತರ ಭಾರತೀಯರ ಮೇಲೆ ಹಲ್ಲೆ
ಸ್ಕಾರ್ಲೆಟ್ ಕೊಲೆ ಪ್ರಕರಣದ ಸುತ್ತ ಸಂಶಯದ ಹುತ್ತ
ದಕ್ಷಿಣ ಗೋವಾಗೆ ತೆರಳಿದ ಫಿಯೋನಾ