ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆಸ್ತಿ ವಿವಾದ :ಎನ್‌ಕೌಂಟರ್ ಸ್ಪೆಷಲಿಸ್ಟ್ ಹತ್ಯೆ
ದೆಹಲಿ ಪೊಲೀಸ್‌ನ ಎನ್‌ಕೌಂಟರ್ ಸ್ಪೆಷಲಿಸ್ಟ್ ರಾಜ್‌ಬಿರ್ ಸಿಂಘ ಅವರನ್ನು ಆಸ್ತಿ ವಿವಾದದ ಹಿನ್ನೆಲೆಯಲ್ಲಿ ದೆಹಲಿ ಹೊರವಲಯದ ಗುರ್ಗಾಂವ್ ಪ್ರದೇಶದಲ್ಲಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಆಸ್ತಿ ವಿತರಕರಾದ ವಿಜಯ್ ಭಾರಧ್ವಜ್ ಎಸಿಪಿ ರಾಜ್‌ಬಿರ್ ಸಿಂಗ್ ಅವರನ್ನು ರಾತ್ರಿ 8.45 ಗಂಟೆ ಸುಮಾರಿಗೆ ಹತ್ಯೆ ಮಾಡಲಾಗಿದ್ದು ರಾಜ್‌ಬಿರ್ ಅವರ ಶವ ವಿಜಯ್ ಅಸೋಸಿಯೇಟ್ಸ್ ಅಂಗಡಿಯಲ್ಲಿ ದೊರೆತಿದ್ದು ಆರೋಪಿ ಭಾರಧ್ವಜ್ ಪೊಲೀಸರಿಗೆ ಶರಣಾಗಿದ್ದಾರೆ.

ಗುರ್ಗಾಂವ್‌ನ ಇಫ್ಕೋ ಚೌಕ್ ಹತ್ತಿರವಿರುವ ವಿಜಯ್ ಭಾರಧ್ವಜ್ ಮಳಿಗೆಗೆ ಎಸಿಪಿ ರಾಜ್‌ಬಿರ್ ಸಿಂಗ್ ಭೇಟಿ ನೀಡಿದ್ದು 45 ನಿಮಿಷಗಳ ವಾದವಿವಾದದ ನಂತರ ಭಾರಧ್ವಜ್ ರಿವಾಲ್ವರ್‌ನಿಂದ ಮೂರು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಎಸಿಪಿ ರಾಜ್‌ಬಿರ್ ಸಿಂಗ್ ಅವರನ್ನು ಹತ್ಯೆ ಮಾಡಲು ಗುರ್ಗಾಂವ್‌ನ ಎಂಜಿ ರಸ್ತೆಯಲ್ಲಿರುವ ಕೋಟ್ಯಂತರ ಬೆಲೆಬಾಳುವ ಆಸ್ತಿ ವಿವಾದ ಕಾರಣವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

1982ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಯಾದ ರಾಜ್‌ಬಿರ್‌ಸಿಂಗ್ ಸುಮಾರು 56 ಎನ್‌ಕೌಂಟರ್‌ಗಳಲ್ಲಿ ಭಾಗವಹಿಸಿದ್ದು ಅನೇಕ ಬಾರಿ ರಾಷ್ಟ್ರಪತಿ ಪದಕವನ್ನು ಪಡೆದಿದ್ದಾರೆ.

ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ರಾಜ್‌ಬಿರ್‌ಸಿಂಗ್ ಅವರನ್ನು ಅಪರಾಧ ವಿಭಾಗದಿಂದ ಭಯೋತ್ಪಾದಕ ನಿಗ್ರಹ ದಳಕ್ಕೆ ವರ್ಗಾಯಿಸಲಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮತ್ತಷ್ಟು
ಅಣು ಒಪ್ಪಂದ:ಪ್ರಣಬ್‌, ಬುಷ್ ಮಾತುಕತೆ
ಶಿವಾನಿ ಕೊಲೆ ಪ್ರಕರಣ: ಶರ್ಮಾಗೆ ಜೀವಾವಧಿ ಶಿಕ್ಷೆ
ಕೇಂ, ಸರಕಾರಿ ನೌಕರರ ವೇತನ ಶೇ 40ರಷ್ಟು ಹೆಚ್ಚಳ
ಶಿವಾಜಿ ಜಯಂತಿ ನಿಮಿತ್ಯ ರಾಜ್ ಠಾಕ್ರೆ ಭಾಷಣ
ಅಣುಶಕ್ತಿ ಬಳಕೆಗೆ ಹಿಂಜರಿಕೆ ಇಲ್ಲ-ಪ್ರಧಾನಿ
ನಾಲ್ವರು ಉತ್ತರ ಭಾರತೀಯರ ಮೇಲೆ ಹಲ್ಲೆ