ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗೋಧ್ರಾ ಪುನರ್ ತನಿಖೆಗೆ ಸರಕಾರ ಸಿದ್ದ
ಗೋಧ್ರಾ ಘಟನೆಯ ನಂತರ 2002ರಲ್ಲಿ ನಡೆದ ಕೋಮು ಗಲಭೆಯ ಕೆಲ ಪ್ರಕರಣಗಳ ಪುನರ್ ತನಿಖೆಗೆ ಗುಜರಾತ್ ಸರಕಾರ ಸಿದ್ದವಿದೆ ಎಂದು ಸುಪ್ರೀಂ ಕೋರ್ಟಿಗೆ ಮಂಗಳವಾರ ಹೇಳಿದೆ.

ಸುಪ್ರೀಂ ಕೋರ್ಟಿಗೆ ನೀಡಿರುವ ವಾಗ್ದಾನದಲ್ಲಿ ಗೋಧ್ರಾ, ಸರ್ದಾರಪುರ್, ನರೋಡಾ ಪಾಟಿಯಾ ಮತ್ತು ಗುಲ್ಬೆರ್ಗ ಸೊಸೈಟಿಯಲ್ಲಿ ನಡೆದ ಹತ್ಯೆ ಮತ್ತು ಲೂಟಿ ಪ್ರಕರಣಗಳು ಸೇರಿದಂತೆ ಒಟ್ಟು 10 ಪ್ರಕರಣಗಳನ್ನು ಸವಿಸ್ತಾರ ತನಿಖೆಗೆ ಒಳಪಡಿಸಲಾಗುವುದು ಎಂದು ನ್ಯಾಯಾಲಯ ಹೇಳಿತು.

ನ್ಯಾಯಮೂರ್ತಿ ಅರಿಜೀತ್ ಪಸಾಯತ್, ಪಿ ಸದಾಶಿವಂ ಮತ್ತು ಅಫ್ತಾಬ್ ಅಲಂ ಅವರನ್ನು ಒಳಗೊಂಡ ವಿಭಾಗೀಯ ಪೀಠವು ಇಂದು ಗೊಧ್ರಾ ನಂತರದ ನಡೆದ ಕೋಮು ಗಲಬೆಯ ಘಟನೆಗಳನ್ನು ಸವಿಸ್ತಾರ ತನಿಖೆಗೆ ಐವರು ಸದಸ್ಯರ ವಿಶೇಷ ತನಿಖಾ ದಳವನ್ನು ತಾನು ರಚಿಸುವುದಾಗಿ ಹೇಳಿದ್ದು, ತನಿಖಾ ದಳ ಮೂರು ತಿಂಗಳ ಒಳಗೆ ವರದಿ ಸಲ್ಲಿಸಲಿದೆ ಎಂದು ಆದೇಶ ನೀಡಿತು.

ಐಪಿಎಸ್ ಅಧಿಕಾರಿಗಳಾದ ಗೀತಾ ಜೊಹ್ರಿ, ಶಿವಾನಂದ್ ಝಾ, ಆಶೀಷ್ ಭಾಟಿಯಾ ಮತ್ತು ನಿವೃತ್ತ ಸಿಬಿಐ ನಿರ್ದೇಶಕ ಆರ್ ಕೆ ರಾಘವನ್ ಮತ್ತು ನಿವೃತ್ತ ಡಿಜಿಪಿ ಸಿಬಿ ಸತ್ಪತಿ ಅವರುಗಳು ಕೆಲ ಪ್ರಕರಣಗಳನ್ನು ಪುನರ್ ತನಿಖೆಗೆ ಒಳಪಡಿಸಲಿದ್ದಾರೆ ಎಂದು ಸರ್ವೋಚ್ಚ ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

ರಾಷ್ಟ್ರೀಯ ಮಾನವ ಹಕ್ಕು ಆಯೋಗವು ಗುಜರಾತ್‌ನಲ್ಲಿ ನಡೆಯುತ್ತಿರುವ ಕೋಮು ಗಲಭೆಗೆ ಸಂಬಂಧಪಟ್ಟ ಪ್ರಕರಣಗಳ ತನಿಖೆಯನ್ನು ಬೇರೆ ಸ್ಥಳಗಳಿಗೆ ವರ್ಗಾವಣೆ ಮಾಡಿ, ಸಿಬಿಐನಂತಹ ಸ್ವತಂತ್ರ ತನಿಖಾ ಸಂಸ್ಥೆಗೆ ವಹಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿತ್ತು. ಗುಜರಾತ್‌ನಲ್ಲಿ ಕೋಮು ಗಲಭೆ ಸಂಬಂಧಿ ಪ್ರಕರಣಗಳ ವಿಚಾರಣೆ ಸಮಯದಲ್ಲಿ ಹಲವಾರು ಪ್ರಮುಖ ಸಾಕ್ಷಿಗಳು ಜೀವ ಭಯದ ಕಾರಣ ತಮ್ಮ ಹೇಳಿಕೆಗಳನ್ನು ಬದಲಾಯಿಸಿದ್ದಾರೆ ಎಂದು ಹೇಳಿತ್ತು.
ಮತ್ತಷ್ಟು
ಗೋವಾ: ಸ್ಕಾರ್‌ಲೆಟ್ ಪ್ರಕರಣ ಸಿಬಿಐಗೆ?
ಆಸ್ತಿ ವಿವಾದ :ಎನ್‌ಕೌಂಟರ್ ಸ್ಪೆಷಲಿಸ್ಟ್ ಹತ್ಯೆ
ಅಣು ಒಪ್ಪಂದ:ಪ್ರಣಬ್‌, ಬುಷ್ ಮಾತುಕತೆ
ಶಿವಾನಿ ಕೊಲೆ ಪ್ರಕರಣ: ಶರ್ಮಾಗೆ ಜೀವಾವಧಿ ಶಿಕ್ಷೆ
ಕೇಂ, ಸರಕಾರಿ ನೌಕರರ ವೇತನ ಶೇ 40ರಷ್ಟು ಹೆಚ್ಚಳ
ಶಿವಾಜಿ ಜಯಂತಿ ನಿಮಿತ್ಯ ರಾಜ್ ಠಾಕ್ರೆ ಭಾಷಣ