ಪುಣೆಯ ಹತ್ತಿರದಲ್ಲಿರುವ ಲೋನಾವಾಲಾದಲ್ಲಿರುವ ಭೂಮಿಯನ್ನು ರೈತರಿಗೆ ದಾನ ಮಾಡುವುದಾಗಿ ನೀಡಿದ ಹೇಳಿಕೆಯನ್ನು ಹಿಂತೆಗೆದುಕೊಳ್ಳುತ್ತಿರುವುದಾಗಿ ಬಾಲಿವುಡ್ ಸೂಪರ್‌ಸ್ಟಾರ್ ಅಮಿತಾಬ್ ಬಚ್ಚನ್ ತಿಳಿಸಿದ್ದಾರೆ.
ಬಚ್ಚನ್ ಪುಣೆಯ ವಿಭಾಗೀಯ ಅಧಿಕಾರಿಗಳಿಗೆ ಪತ್ರ ಬರೆದು ರೈತರಿಗೆ ಭೂದಾನ ಮಾಡುವುದಾಗಿ ಈ ಹಿಂದೆ ನೀಡಿದ ದಾಖಲಾತಿಗಳನ್ನು ಮರಳಿಸುವಂತೆ ಕೋರಿದ್ದಾರೆ.
ಉತ್ತರ ಪ್ರದೇಶದ ಬಾರಾಬಂಕಿಯಲ್ಲಿರುವ ತಮ್ಮ ಹೆಸರಿನಲ್ಲಿರುವ ಭೂಮಿಯ ಕುರಿತಂತೆ ಸಲ್ಲಿಸಿದ ದಾಖಲಾತಿಗಳನ್ನು ಪುಣೆಯಲ್ಲಿ ಹಾಜರುಪಡಿಸಿದ ನಂತರ ಲೋನಾವಾಲಾದಲ್ಲಿರುವ ಭೂಮಿಯನ್ನು ಅಮಿತಾಬ್ ಹೆಸರಿಗೆ ವರ್ಗಾಯಿಸಲಾಗಿತ್ತು.
ಪುಣೆಯ ಹತ್ತಿರದಲ್ಲಿರುವ ಲೋನಾವಾಲಾದಲ್ಲಿರುವ ಭೂಮಿಯನ್ನು ತಮ್ಮ ಹೆಸರಿಗೆ ನೋಂದಾಯಿಸುವ ಸಂದರ್ಭದಲ್ಲಿ ಭಾರಿ ಟೀಕೆಗಳನ್ನು ಎದುರಿಸಬೇಕಾಗಿ ಬಂದಾಗ ಬಚ್ಚನ್ ತಮ್ಮ ಭೂಮಿಯನ್ನು ರೈತರಿಗೆ ದಾನ ಮಾಡುವ ಅನಿಸಿಕೆಯನ್ನು ವ್ಯಕ್ತಪಡಿಸಿದ್ದರು.
|