ವಿಧಾನಸಭೆಯಲ್ಲಿ ಮೇಲ್ವಿಚಾರಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಗಾಯಿತ್ರಿ ಪಂಡಾ ಅವರಿಗೆ ಒರಿಸ್ಸಾ ವಿಧಾನಸಭೆಯ ಸಭಾಪತಿ ಮಹೇಶ್ವರ ಮೊಹಾಂಟಿ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿದ್ದಾರೆ.
ವಿಧಾನಸಭೆಯಲ್ಲಿ ಸಹಾಯಕ ಮೇಲ್ವಿಚಾರಕಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಮೊಹಾಂಟಿಯವರು ತಮ್ಮ ಆಪ್ತರನ್ನು ನನ್ನ ಬಳಿಗೆ ಕಳುಹಿಸಿ ಖಾಸಗಿಯಾಗಿ ಭೇಟಿಯಾಗುವಂತೆ ಒತ್ತಾಯಿಸುತ್ತಿದ್ದರು ಎಂದು ಮಾಧ್ಯಮಗಳಿಗೆ ಗಾಯಿತ್ರಿ ಪಂಡಾ ತಿಳಿಸಿದ್ದಾರೆ.
ಗಾಯಿತ್ರಿ ಪಂಡಾ ಅವರ ಆರೋಪವನ್ನು ತಳ್ಳಿ ಹಾಕಿದ ಮೊಹಾಂಟಿ ವಿಧಾನಸಭೆಯಲ್ಲಿ ಸಹಾಯಕ ಮೇಲ್ವಿಚಾರಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಗಾಯಿತ್ರಿ ಪಂಡಾ ತಮ್ಮ ಕೆಲಸದಲ್ಲಿ ನಿರ್ಲ್ಯಕ್ಷ ತೋರಿದ್ದರಿಂದ ಅವರನ್ನು ಅಮಾನತ್ತಿನಲ್ಲಿಡಲಾಗಿದೆ. ನನ್ನ ವಿರುದ್ದ ಮಾಡಿದ ಲೈಂಗಿಕ ಕಿರುಕುಳ ಆರೋಪದ ಬಗ್ಗೆ ಪಾರದರ್ಶಕ ತನಿಖೆಯಾಗಲಿ. ಪಂಡಾ ಅವರನ್ನು ನಾನು ಇಲ್ಲಿಯವರೆಗೆ ಚೇಂಬರ್‌ಗೆ ಕೂಡಾ ಬರುವಂತೆ ಆದೇಶಿಸಿಲ್ಲವೆಂದು ಹೇಳಿದ್ದಾರೆ.
ನನ್ನ ವಿರುದ್ದ ಮಾಡಿದ ಆರೋಪಗಳ ಕುರಿತಂತೆ ವಿಧಾನಸಭೆಯಲ್ಲಿ ಚರ್ಚಿಸುವುದಾಗಿ ತಿಳಿಸಿದ ಅವರು ಗಾಯಿತ್ರಿ ಪಂಡಾ ಅಮಾನತ್ತುಗೊಂಡ ನಂತರ ನನ್ನ ವಿರುದ್ದ ಲೈಂಗಿಕ ಕಿರುಕುಳದ ಆರೋಪ ಮಾಡಿರುವುದು ಅನುಮಾನ ಮೂಡಿಸಿದೆ ಎಂದು ಹೇಳಿದ್ದಾರೆ.
|