ಜಾಗತಿಕ ತಾಪಮಾನವನ್ನು ತಡೆಯದಿದ್ದಲ್ಲಿ ದೇಶದ ಕರಾವಳಿ ತೀರಗಳು ಸಮುದ್ರದಲ್ಲಿ ಮುಳುಗಲಿವೆ ಎಂದು ಗ್ರೀನ್‌ಪೀಸ್ ಸಂಘಟನೆಯ ಬ್ಲೂ ಅಲರ್ಟ್ ಶೀರ್ಷಿಕೆಯ ತನ್ನ ವರದಿಯಲ್ಲಿ ಬಹಿರಂಗಪಡಿಸಿದೆ.
ಗ್ರೀನ್‌ಪೀಸ್ ಸಂಘಟನೆಯ ಬ್ಲೂ ಅಲರ್ಟ್ ವರದಿಯ ಪ್ರಕಾರ ಜಾಗತಿಕ ತಾಪಮಾನವನ್ನು ನಿಯಂತ್ರಿಸದಿದ್ದಲ್ಲಿ ಮುಂಬರುವ ನೂರು ವರ್ಷಗಳಲ್ಲಿ ಐದು ಡಿಗ್ರಿ ತಾಪಮಾನ ಹೆಚ್ಚಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದೆ.
ಜಾಗತಿಕ ತಾಪಮಾನದ ಹಿನ್ನೆಲೆಯಲ್ಲಿ ಕೇವಲ ಭಾರತದಲ್ಲಿ ಭೂಭಾಗದ ಅನೇಕ ಪ್ರದೇಶಗಳು ಸಮುದ್ರದಲ್ಲಿ ಮುಳಗಿ ಹೋಗಲಿದ್ದು, 50 ಮಿಲಿಯನ್ ಜನತೆ ನಿರಾಶ್ರಿತರಾಗಲಿದ್ದಾರೆ. ದಶಕದ ಅವಧಿಯೊಳಗೆ ಎರಡು ಡಿಗ್ರಿ ತಾಪಮಾನ ಹೆಚ್ಚಾಗಿದೆ ಎಂದು ವರದಿಯಲ್ಲಿ ಪ್ರಕಟಿಸಲಾಗಿದೆ.
ಜಾಗತಿಕ ತಾಪಮಾನ ಕುರಿತಂತೆ ಸರಕಾರ ಧೃಡ ನಿಲುವುಗಳನ್ನು ತೆಗೆದುಕೊಳ್ಳುವಂತೆ ಜನತೆಯನ್ನು ಪ್ರೋತ್ಸಾಹಿಸಲಾಗುವುದು ಎಂದು ಗ್ರೀನ್‌ಪೀಸ್ ಸಂಘಟನೆ ತಿಳಿಸಿದೆ.
ಜಾಗತಿಕ ತಾಪಮಾನದಿಂದಾಗಿ ಚೆನ್ನೈ ಮಹಾನಗರ ಸಮುದ್ರದಲ್ಲಿ ಮುಳುಗಿ 10 ಮಿಲಿಯನ್ ಜನತೆ ನಿರಾಶ್ರಿರಾಗಲಿರುವುದರಿಂದ ಸರಕಾರದ ಮೇಲೆ ಹೆಚ್ಚಿನ ಒತ್ತಡ ತರುವುದು ಅಗತ್ಯವಾಗಿದೆ ಎಂದು ಗ್ರೀನ್‌ಪೀಸ್ ಸಂಘಟನೆಯ ಸಂಚಾಲಕಿ ನಟಾಶಾ ಚಾಂಡಿ ತಿಳಿಸಿದ್ದಾರೆ.
|