ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗುಜರಾತ್ ದಂಗೆ: ವಿಶೇಷ ತನಿಖಾ ತಂಡ ನೇಮಕ
ಗುಜರಾತ್‌ ರಾಜ್ಯದಲ್ಲಿ ನಡೆದ 10 ದಂಗೆಗಳ ಕುರಿತು ತನಿಖೆ ನಡೆಸುವಂತೆ ಸರ್ವೊಚ್ಚ ನ್ಯಾಯಾಲಯ ಐವರು ಸದಸ್ಯರುಳ್ಳ ವಿಶೇಷ ತನಿಖಾ ತಂಡ ನೇಮಕ ಮಾಡಿ ಆದೇಶ ಹೊರಡಿಸಿದೆ.

ವಿಶೇಷ ತನಿಖಾ ತಂಡ ಮೂರು ತಿಂಗಳ ಅವಧಿಯಲ್ಲಿ ವರದಿಯನ್ನು ಸಲ್ಲಿಸಲಿದ್ದು ವರದಿ ಸಲ್ಲಿಕೆಯ ನಂತರ ಮುಂದಿನ ಆದೇಶವನ್ನು ನ್ಯಾಯಾಲಯ ನೀಡುತ್ತದೆ.ಅನಧಿಕೃತ ಮೂಲಗಳ ಪ್ರಕಾರ ಮುಂಬರುವ ಅಗಸ್ಟ್ ತಿಂಗಳಲ್ಲಿ ವಿಚಾರಣೆಯನ್ನು ನಡೆಸಬಹುದು ಎಂದು ತಿಳಿಸಿವೆ.

ವಿಶೇಷ ತನಿಖಾ ತಂಡ ರಾಜ್ಯದಲ್ಲಿ ನಡೆದ 10 ದಂಗೆಗಳ ಕುರಿತಂತೆ ತನಿಖೆ ನಡೆಸುವುದಿಲ್ಲ. ಈ ಹಿಂದೆ ನಡೆದ ತನಿಖಾ ವರದಿಯನ್ನು ಪರಿಶೀಲಿಸಿ, ಅಗತ್ಯವಾದಲ್ಲಿ ಸಾಕ್ಷಿಗಳ ಪುನರ್‌ವಿಚಾರಣೆಗೆ ಒಳಪಡಿಸಲಾಗುತ್ತದೆ ಎಂದು ಹೇಳಲಾಗಿದೆ.

ಸರ್ವೊಚ್ಚ ನ್ಯಾಯಾಲಯ ನೇಮಕ ಮಾಡಿದ ವಿಶೇಷ ತನಿಖಾ ತಂಡದಲ್ಲಿ ಗುಜರಾತ್‌ನ ಗೀತಾ ಜೋಹ್ರಿ, ಶಿವಾನಂದ್ ಝಾ, ಮತ್ತು ಆಶಿಶ್ ಭಾಟಿಯಾ ಮೂವರು ಐಪಿಎಸ್ ಅಧಿಕಾರಿಗಳಿದ್ದಾರೆ. ಉತ್ತರ ಪ್ರದೇಶದ ಮಾಜಿ ಡಿಜಿಪಿ ಎ.ಸತ್‌ಪಥಿ ಹಾಗೂ ಸಿಬಿಐನ ಮಾಜಿ ನಿರ್ದೇಶಕ ಆರ್.ಕೆ.ರಾಘವನ್ ಅವರು ತಂಡದ ನೇತೃತ್ವವಹಿಸಲಿದ್ದಾರೆ ಎಂದು ತಿಳಿಸಿದೆ.

ವಿಶೇಷ ತನಿಖಾ ತಂಡ ಉತ್ತಮ ರೀತಿಯಲ್ಲಿ ಪಾರದರ್ಶಕವಾಗಿ ತನಿಖೆ ಮಾಡದಿದ್ದಲ್ಲಿ ಪ್ರಕರಣವನ್ನು ಹೊರರಾಜ್ಯಗಳಿಗೆ ವರ್ಗಾಯಿಸಲಾಗುವುದು ಎಂದು ಪ್ರಕಟಿಸಿದೆ.
ಮತ್ತಷ್ಟು
ಗ್ರೀನ್‌ಪೀಸ್‌ನಿಂದ ಬ್ಲೂ ಅಲರ್ಟ್ ವರದಿ ಬಹಿರಂಗ
ಒರಿಸ್ಸಾ: ಸಭಾಪತಿಯಿಂದ ಲೈಂಗಿಕ ಕಿರುಕುಳ ಆರೋಪ
ಲೋನಾವಾಲಾ ಭೂದಾನ ತಿರಸ್ಕರಿಸಿದ ಬಿಗ್ ಬಿ
ಗೋಧ್ರಾ ಪುನರ್ ತನಿಖೆಗೆ ಸರಕಾರ ಸಿದ್ದ
ಗೋವಾ: ಸ್ಕಾರ್‌ಲೆಟ್ ಪ್ರಕರಣ ಸಿಬಿಐಗೆ?
ಆಸ್ತಿ ವಿವಾದ :ಎನ್‌ಕೌಂಟರ್ ಸ್ಪೆಷಲಿಸ್ಟ್ ಹತ್ಯೆ