17 ರಾಜ್ಯಗಳಿಂದ 56ಅಭ್ಯರ್ಥಿಗಳಿಗಾಗಿ ರಾಜ್ಯಸಭೆಗೆ ನಡೆಯಲಿರುವ ದ್ವೈವಾರ್ಷಿಕ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೇ ನಡೆಯುತ್ತಿದ್ದು,ಮಹಾರಾಷ್ಟ್ರದಲ್ಲಿರುವ ಏಳು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮಹಾರಾಷ್ಟ್ರದಲ್ಲಿರುವ ಏಳು ಅಭ್ಯರ್ಥಿಗಳು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದು, ತಮಿಳುನಾಡು ಹಾಗೂ ಆಂಧ್ರಪ್ರದೇಶಗಳಲ್ಲಿ ರಾಜ್ಯಸಭೆಗೆ ಇಂದು ಚುನಾವಣೆ ನಡೆಯುತ್ತಿವೆ.
ಪಶ್ಚಿಮ ಬಂಗಾಳ, ಬಿಹಾರ್‌ಗಳಿಂದ ತಲಾ ಐದು ಹಾಗೂ ಒರಿಸ್ಸಾ ಮತ್ತು ಗುಜರಾತ್‌ಗಳಿಂದ ತಲಾ ನಾಲ್ಕು ಸೀಟ್‌ಗಳನ್ನು ತುಂಬಬೇಕಾಗಿದೆ.
ಬೆಳಗ್ಗೆ 9ಗಂಟೆಯಿಂದ 4 ಗಂಟೆಯವರೆಗೆ ಮತದಾನ ನಡೆಯುತ್ತಿದ್ದು, ಸಾಯಂಕಾಲ 5 ಗಂಟೆಗೆ ಮತಎಣಿಕೆ ಕಾರ್ಯ ಆರಂಭವಾಗಲಿದೆ ಎಂದು ರಾಜ್ಯಸಭೆಯ ಮೂಲಗಳು ತಿಳಿಸಿವೆ.
|