ಒರಿಸ್ಸಾ ಮತ್ತು ಆಂಧ್ರಪ್ರದೇಶದ ಗಡಿಯಲ್ಲಿರುವ ರೈಲು ನಿಲ್ದಾಣವನ್ನು ಮಾವೋವಾದಿಗಳು ಸ್ಪೋಟಿಸಿದ್ದು, ಯಾವುದೇ ಸಾವು ನೋವುಗಳಾದ ವರದಿಯಾಗಿಲ್ಲವೆಂದು ಪೊಲೀಸ್ ಮೂಲಗಳು ತಿಳಿಸಿವೆ.
ಮಾವೋವಾದಿಗಳ ತಂಡ ಮಂಗಳವಾರದ ರಾತ್ರಿ ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯ ಗುಮುಡಾ ರೈಲು ನಿಲ್ದಾಣಕ್ಕೆ ದಾಳಿ ಮಾಡಿ ನಿಯಂತ್ರಣ ಕೊಠಡಿಯನ್ನು ಸ್ಪೋಟಿಸಿದೆ ಎಂದು ಆಂಧ್ರಪ್ರದೇಶದ ಪೊಲೀಸ್ ಅಧಿಕಾರಿ ವಿಕ್ರಮ್‌ಸಿಂಗ್ ಮಾನ್ ತಿಳಿಸಿದ್ದಾರೆ.
ಒರಿಸ್ಸಾದ ರಾಯಗಢ ಜಿಲ್ಲೆಯಿಂದ ಗುಮುಡಾ ರೈಲು ನಿಲ್ದಾಣ ಕೇವಲ 25 ಕಿ.ಮಿ. ದೂರದಲ್ಲಿದೆ. ಮಾವೋವಾದಿಗಳು ನಿಯಂತ್ರಣ ಕೊಠಡಿಯನ್ನು ಸ್ಪೋಟಿಸಿದ್ದರಿಂದ ರೈಲು ಸಂಚಾರ ವ್ಯವಸ್ಥೆ ಕೆಲ ಗಂಟೆಗಳ ಕಾಲ ಅಸ್ತವ್ಯಸ್ತಗೊಂಡಿದ್ದು ಇಂದು ಮುಂಜಾನೆ ಸರಿಪಡಿಸಲಾಗಿದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.
ಒರಿಸ್ಸಾ ಮತ್ತು ಆಂಧ್ರಪ್ರದೇಶದ ಕೆಲ ಗಡಿ ಭಾಗಗಳನ್ನು ಮಾವೋವಾದಿ ಉಗ್ರರು ಸ್ವತಂತ್ರ ಪ್ರದೇಶವೆಂದು ಘೋಷಿಸಿದ್ದು, ಪೊಲೀಸರು ಹಾಗೂ ಶ್ರೀಮಂತರ ಮೇಲೆ ದಾಳಿ ನಡೆಸುತ್ತಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮಾವೋವಾದಿಗಳ ವಿರುದ್ದ ಆಂಧ್ರಪ್ರದೇಶ, ಚತ್ತಿಸ್‌ಗಢ್ ಮತ್ತು ಒರಿಸ್ಸಾ ರಾಜ್ಯಗಳು ಜಂಟಿ ಕಾರ್ಯಾಚರಣೆ ನಡೆಸಲು ಉದ್ದೇಶಿಸಿದ ವಾರದಲ್ಲಿ ಈ ಘಟನೆ ಸಂಭವಿಸಿದೆ.
|