ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಒಡೆದ ಮನೆ ಶಿವಸೇನೆ
ಮಹಾರಾಷ್ಟ್ರದಲ್ಲಿ ಮರಾಠಿಯೇತರರ ವಿರುದ್ಧ ನಡೆಯುತ್ತಿರುವ ಅವ್ಯಾಹತ ಹಿಂಸಾಚಾರವನ್ನು ಪ್ರತಿಭಟಿಸಿ ಶಿವಸೇನೆಯ ಉತ್ತರ ಭಾರತೀಯ ನಾಯಕರು ಸಾಮೂಹಿಕವಾಗಿ ರಾಜೀನಾಮೆ ಸಲ್ಲಿಸುವ ಮೂಲಕ ಶಿವಸೇನೆ ಒಡೆದ ಮನೆಯಾಗಿದೆ.

ಖಲಿಸ್ತಾನ್ ಕಾಶ್ಮೀರಿ ಉಗ್ರರಿಗಿಂತ ಶಿವಸೇನೆ ಭಿನ್ನವಾಗಿಲ್ಲ. ಜನರನ್ನು ಪ್ರಾದೇಶಿಕ ನೆಲೆಗಟ್ಟಿನ ಮೇಲೆ ಶಿವಸೇನೆ ವಿಭಜಿಸುತ್ತಿದೆ. ಈ ರೀತಿ ಜನರ ಮನಸ್ಸಿನಲ್ಲಿ ಹುಳಿ ಹಿಂಡುವ ಮೂಲಕ ಇಡೀ ದೇಶದ ಸಮಗ್ರತೆಯನ್ನು ಹಾಳು ಈ ಶಕ್ತಿಗಳು ಪ್ರಯತ್ನಿಸುತ್ತಿವೆ. ವಿಭಜಕ ಶಕ್ತಿಗಳನ್ನು ನಿಯಂತ್ರಿಸಲು ಮಹಾರಾಷ್ಟ್ರದಲ್ಲಿ ನಮ್ಮದೇ ಪಕ್ಷ ಆಸ್ತಿತ್ವಕ್ಕೆ ಬರಲಿದೆ ಎಂದು ಸುದ್ದಿಗಾರರಿಗೆ ಉತ್ತರ ಭಾರತದ ಶಿವಸೇನಾ ನಾಯಕ ಜೈ ಭಗವಾನ್ ಗೊಯಲ್ ಹೇಳಿದರು.

ಮಹಾರಾಷ್ಟ್ರದಲ್ಲಿ ಮರಾಠಿಯೇತರ ಅದರಲ್ಲೂ ಉತ್ತರ ಭಾರತೀಯ ಮೂಲದವರನ್ನು ಶಿವಸೇನೆ ನಡೆಸಿಕೊಳ್ಳುತ್ತಿರುವ ರೀತಿಯಿಂದ ಉತ್ತರ ಭಾರತದಲ್ಲಿ ಇರುವ ಶಿವಸೈನಿಕರ ಮನಸ್ಸಿಗೆ ನೋವಾಗಿದೆ. ಉತ್ತರ ಭಾರತೀಯರ ಮೇಲಿನ ಹಲ್ಲೆ ನಿಲ್ಲದೇ ಹೋದಲ್ಲಿ ನಾವು ಕೂಡ ಇದೇ ರೀತಿ ಉತ್ತರ ಭಾರತದಲ್ಲಿ ಉತ್ತರಿಸಬೇಕಾಗುತ್ತದೆ. ಯಾವುದೇ ಹಂತಕ್ಕೂ ನಾವು ಹೋಗಬಲ್ಲೆವು ಎಂದು ಕಳೆದ 20 ವರ್ಷಗಳಿಂದ ಶಿವಸೇನೆಯೊಂದಿಗೆ ಗುರುತಿಸಿಕೊಂಡಿರುವ ಗೊಯಲ್ ಹೇಳಿದರು. ಜೈ ಭಗವಾನ್ ಗೊಯಲ್ ಅವರಿಗೆ ಜಾರ್ಖಂಡ್, ಹಿಮಾಚಲ ಪ್ರದೇಶ, ದೆಹಲಿ, ಹರಿಯಾಣ ಮತ್ತು ಪಂಜಾಬ್ ರಾಜ್ಯ ಶಿವಸೇನಾ ಘಟಕಗಳ ಬೆಂಬಲ ಪಡೆದಿದ್ದಾರೆ.
ಮತ್ತಷ್ಟು
ಮಾವೋವಾದಿಗಳಿಂದ ರೈಲು ನಿಲ್ದಾಣ ಸ್ಪೋಟ
ರಾಜ್ಯಸಭೆ ಚುನಾವಣೆ:ಮತದಾನ ಆರಂಭ
ಗುಜರಾತ್ ದಂಗೆ: ವಿಶೇಷ ತನಿಖಾ ತಂಡ ನೇಮಕ
ಕರಾವಳಿ ತೀರಗಳನ್ನು ನುಂಗಲಿರುವ ಜಾಗತಿಕ ತಾಪಮಾನ
ಒರಿಸ್ಸಾ: ಸಭಾಪತಿಯಿಂದ ಲೈಂಗಿಕ ಕಿರುಕುಳ ಆರೋಪ
ಲೋನಾವಾಲಾ ಭೂದಾನ ತಿರಸ್ಕರಿಸಿದ ಬಿಗ್ ಬಿ