ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೊಳವೆ ಬಾವಿಗೆ ಬಿದ್ದ ವಂದನಾಗೆ ಮರುಜನ್ಮ
ಎರಡುವರೆ ವರ್ಷಧ ಬಾಲೆ ವಂದನಾ ಆಟವಾಡುವಾಗ ಕೊರೆದ ಕೊಳವೆ ಬಾವಿಗೆ ಬಿದ್ದದ್ದು, ಸೇನಾ ಪಡೆಗಳ 26 ಗಂಟೆಯ ನಿರಂತರ ಶ್ರಮದಿಂದಾಗಿ ಬದುಕುಳಿದು ಪವಾಡ ಸೃದೃಶ ಪಾರಾಗಿದ್ದಾಳೆ.

ಕೊಳವೆ ಬಾವಿಗೆ ಬಿದ್ದ ಬಾಲೆ ವಂದನಾ ತನ್ನ ತಂದೆ ತಾಯಿಯನ್ನು ಕರೆಗೆ ಪ್ರತಿಕ್ರೀಯೆ ನೀಡುತ್ತಿರುವುದು ಪವಾಡವಲ್ಲದೇ ಮತ್ತೇನು ಅಲ್ಲ. ಪ್ರತಿಬಾರಿ ಕರೆದಾಗಲೂ ಅದಕ್ಕೆ ವಂದನಾ ಉತ್ತರ ನೀಡುತ್ತಿದ್ದುದರಿಂದ ವೈದ್ಯರು ಜೀವಂತವಿದ್ದಾಳೆ ಎನ್ನುವ ಭರವಸೆಯಿಂದಾಗಿ ನೆಮ್ಮದಿಯಿಂದ ಕಾರ್ಯನಿರ್ವಹಿಸಿದರು ಎನ್ನಲಾಗಿದೆ.

ಮಗು ಕೇವಲ ಎರಡುವರೆ ವರ್ಷದ ಬಾಲೆಯಾಗಿದ್ದರಿಂದ ಸೇನಾಪಡೆಗಳು ಅತಿ ಸೂಕ್ಷ್ಮವಾಗಿ ಕಾರ್ಯನಿರ್ವಹಿಸಲು ಸಿದ್ದವಾಗಿ ಕೊಳವೆ ಬಾವಿಗೆ ಸಮನಾಗಿ ಇನ್ನೊಂದು ಕೊಳವೆ ಬಾವಿಯನ್ನು ಕೊರೆದು ಬಾಲೆ ಬಿದ್ದ ಕೊಳವೆ ಬಾವಿಗೆ ಸಮನಾಂತರವಾಗಿ ಸ್ಥಳವನ್ನು ಕೊರೆಯುವಲ್ಲಿ ಸೇನಾಪಡೆ ಭಾರಿ ಶ್ರಮಪಡಬೇಕಾಯಿತು.

ಕಾರ್ಯಾಚರಣೆಯ ಅಂತಿಮ ಹಂತದಲ್ಲಿ ಬಾಲೆಯನ್ನು ಜೀವಂತವಾಗಿ ಹೊರತೆಗೆಯುವ ಸಂದರ್ಭದಲ್ಲಿ ಆತಂಕದ ಕ್ಷಣಗಳನ್ನು ಎದುರಿಸಬೇಕಾಯಿತು. 180 ಅಡಿ ಉದ್ದ 1 ಅಡಿ ಅಗಲವಿರುವ ಕೊಳವೆ ಬಾವಿಯಲ್ಲಿ 40-45 ಅಡಿಯಲ್ಲಿ ವಂದನಾ ಸಿಲುಕಿಕೊಂಡಿರುವುದು ಸೇನಾಪಡೆಗಳಿಗೆ ಸವಾಲಾಗಿತ್ತು. ಕಠಿಣ ಕಾರ್ಯಚರಣೆ ಮುಗಿದ ನಂತರ ಮಗುವನ್ನು ಕೊಳವೆ ಬಾವಿಯಿಂದ ಹೊರತೆಗೆಯಲಾಯಿತು.

ಮತ್ತಷ್ಟು
ಉಗ್ರವಾದಕ್ಕೆ ಐಎಸ್ಐ ಕುಮ್ಮಕ್ಕು: ನಾರಾಯಣನ್
ಒಡೆದ ಮನೆ ಶಿವಸೇನೆ
ಮಾವೋವಾದಿಗಳಿಂದ ರೈಲು ನಿಲ್ದಾಣ ಸ್ಪೋಟ
ರಾಜ್ಯಸಭೆ ಚುನಾವಣೆ:ಮತದಾನ ಆರಂಭ
ಗುಜರಾತ್ ದಂಗೆ: ವಿಶೇಷ ತನಿಖಾ ತಂಡ ನೇಮಕ
ಕರಾವಳಿ ತೀರಗಳನ್ನು ನುಂಗಲಿರುವ ಜಾಗತಿಕ ತಾಪಮಾನ