ಒರಿಸ್ಸಾ ವಿಧಾನಸಭೆಯ ಸಹಾಯಕ ಮೇಲ್ವಿಚಾರಕಿ ಗಾಯಿತ್ರಿ ಪಂಡಾ ಸ್ಪೀಕರ್ ಮಹೇಶ್ವರ ಮೊಹಾಂಟಿ ವಿರುದ್ದ ಲೈಂಗಿಕ ಕಿರುಕುಳ ದೂರನ್ನು ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದಾರೆ
ವಿಧಾನಸಭೆಯಲ್ಲಿ ಸಹಾಯಕ ಮೇಲ್ವಿಚಾರಕಿಯಾಗಿದ್ದ ಗಾಯಿತ್ರಿ ಪಂಡಾ ಮಹೇಶ್ವರ ಮೊಹಾಂತಿ ವಿರುದ್ದ ಅಸಭ್ಯ ವರ್ತನೆ ಕುರಿತಂತೆ ಇತ್ತೀಚೆಗೆ ಮಾಧ್ಯಮಗಳಿಗೆ ಲೈಂಗಿಕ ಕಿರುಕುಳ ಕುರಿತಂತೆ ಹೇಳಿಕೆ ನೀಡಿದ್ದು, ಮಧ್ಯರಾತ್ರಿ ವೇಳೆಯಲ್ಲಿ ಕಾರನ್ನು ಕಳುಹಿಸಿ ಖಾಸಗಿಯಾಗಿ ಭೇಟಿಯಾಗುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಪಂಡಾ ಆರೋಪಿಸಿದ್ದರು.
ಸಹಾಯಕ ಮೇಲ್ವಿಚಾರಕಿಯಾದ ಗಾಯಿತ್ರಿ ಪಂಡಾ ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರುತ್ತಿರುವುದರಿಂದ ಅಮಾನತುಗೊಳಿಸಲಾಗಿದ್ದು,ನನ್ನ ವಿರುದ್ದ ಹುಸಿ ಆರೋಪಗಳನ್ನು ಮಾಡಲಾಗುತ್ತಿದೆ. ಈ ಕುರಿತು ಸಂಪೂರ್ಣ ತನಿಖೆಯಾಗಲಿ ಎಂದು ಬಯಸುತ್ತೇನೆ ಎಂದು ಮೊಹಾಂತಿ ಹೇಳಿದ್ದಾರೆ.
ಸಹಾಯಕ ಮೇಲ್ವಿಚಾರಕಿಯಾದ ಗಾಯಿತ್ರಿ ಪಂಡಾ ನನ್ನನ್ನು ಬ್ಲ್ಯಾಕ್‌ಮೇಲ್ ಮಾಡಲು ಪ್ರಯತ್ನಿಸುತ್ತಿದ್ದು, ನಾನು ಗಾಯಿತ್ರಿ ಪಂಡಾ ಅವರನ್ನು ಚೇಂಬರ್‌ಗೆ ಕೂಡಾ ಕರೆದಿಲ್ಲವೆಂದು ಹೇಳಿ ಆರೋಪಗಳನ್ನು ತಳ್ಳಿಹಾಕಿದ್ದಾರೆ.
|