ಸ್ಟುಡೆಂಟ್ ಇಸ್ಲಾಮಿಕ್ ಮೂವ್‌ಮೆಂಟ್ ಸಂಘಟನೆಯ ಅಖಿಲ್ ಭಾರತದ ಮುಖ್ಯಸ್ಥ ಸಫ್ದಾರ್ ನಗೊರಿ ಸೇರಿದಂತೆ ಹತ್ತು ಮಂದಿಯನ್ನು ಮಧ್ಯಪ್ರದೇಶದ ವಿಶೇಷ ಕಾರ್ಯಾಚರಣೆ ಪಡೆ ಬಂಧಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬಂಧಿತರಾದವರಲ್ಲಿ ಸಿಮಿ ಸಂಘಟನೆಯ ದಕ್ಷಿಣ ರಾಜ್ಯಗಳ ಮುಖ್ಯಸ್ಥ ಕಿಬ್ಲಿ ಮತ್ತು ಮಹಾರಾಷ್ಟ್ರದ ಸಿಮಿ ಸಂಘಟನೆಯ ಮುಖ್ಯಸ್ಥನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿಗಳಿಂದ ಸ್ಥಳದಲ್ಲಿ ಏಳು ರಿವಾಲ್ವರ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಸಿಮಿ ಸಂಘಟನೆಗೆ ಸೇರಲು ನಿರಾಕರಿಸಿದವರನ್ನು ಹತ್ಯೆ ಮಾಡುವ ಉದ್ದೇಶವಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
|