ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಮಿರ್‌ಖಾನ್ ವಿರುದ್ದ ವಾರೆಂಟ್ ಜಾರಿ
ಚಿಂಕಾರಾ ಶೂಟಿಂಗ್‌ ಪ್ರಕರಣದಲ್ಲಿ ಬಾಲಿವುಡ್ ನಟ ಅಮೀರ್‌ಖಾನ್ ಹಾಗೂ ನಿರ್ದೇಶಕ ಅಶುತೋಶ್ ಗೌರಿಕರ್ ಸೇರಿದಂತೆ ಒಟ್ಟು ಆರು ಮಂದಿಯ ವಿರುದ್ದ ನ್ಯಾಯಾಲಯ ವಾರೆಂಟ್ ಜಾರಿ ಮಾಡಿ ಆದೇಶ ಹೊರಡಿಸಿದೆ.

ಎಪ್ರಿಲ್ 15ರಂದು ನ್ಯಾಯಾಲಯದಲ್ಲಿ ಹಾಜರಿರುವಂತೆ ಕಚ್ ಸೆಷೆನ್ಸ್ ನ್ಯಾಯಾಲಯ ವಾರೆಂಟ್ ಜಾರಿ ಮಾಡಿ ಆದೇಶ ಹೊರಡಿಸಿದೆ.

ಆಸ್ಕರ್‌ನಲ್ಲಿ ಉತ್ತಮ ವಿದೇಶಿ ಚಿತ್ರ ಎಂದು ಖ್ಯಾತಿಪಡೆದ ಯಶಸ್ವಿ ಚಿತ್ರ ಲಗಾನ್ ಶೂಟಿಂಗ್‌‌ನಲ್ಲಿ ಚಿಂಕಾರಾದ ಅರಣ್ಯವನದಲ್ಲಿ ಅನುಮತಿ ಪಡೆಯದೇ ಶೂಟಿಂಗ್ ನಡೆಸಿರುವುದರಿಂದ ಚಿತ್ರತಂಡದ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ ಆರೋಪಿತರು ಎಪ್ರಿಲ್ 15 ರಂದು ಹಾಜರಿರಬೇಕೆಂದು ವಾರೆಂಟ್ ಜಾರಿ ಮಾಡಿದೆ.

ಲಗಾನ್ ಚಿತ್ರ ಬಿಡುಗಡೆಯ ನಂತರ ಸೇವಾ ಸಂಸ್ಥೆಯೊಂದು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿತ್ತು. ಗುಜರಾತ್ ಅರಣ್ಯ ಇಲಾಖೆ ಅನೇಕ ನೋಟಿಸ್‌ಗಳನ್ನು ಜಾರಿ ಮಾಡಿದರು ಯಾವುದೇ ಉತ್ತರ ಬಾರದ ಹಿನ್ನೆಲೆಯಲ್ಲಿ ಪ್ರಕರಣ ನ್ಯಾಯಾಲಯದ ಮೆಟ್ಟಲೇರಿದೆ.
ಮತ್ತಷ್ಟು
ಕೃಷಿ ಸಾಲ ಪರಿಹಾರ ನಿಧಿಗೆ ಕೇಂದ್ರದ ಅನುಮೋದನೆ
ಬಾಬಾ ರಾಮ್‌ದೇವ್‌ಗೆ ಬೆದರಿಕೆ ಪತ್ರ
ಇಂದೋರ್‌ನಲ್ಲಿ ಸಿಮಿ ಮುಖ್ಯಸ್ಥನ ಬಂಧನ
ಸ್ಪೀಕರ್ ವಿರುದ್ದ ಲೈಂಗಿಕ ಕಿರುಕುಳ ದೂರು
ತ್ರಿಶೂರು ಪೂರಂ: ಆನೆಗಳ ಪೆರೇಡ್‌ಗೆ ಅಂಕುಶ
ಕೊಳವೆ ಬಾವಿಗೆ ಬಿದ್ದ ವಂದನಾಗೆ ಮರುಜನ್ಮ