ದೆಹಲಿಯಲ್ಲಿ ಎಸಿಪಿಯಾಗಿದ್ದ ರಾಜ್‌ಬಿರ್‌ಸಿಂಗ್ ಕೊಲೆ ಪ್ರಕರಣ ಮೊತ್ತೊಂದು ತಿರುವು ಪಡೆದಿದ್ದು, ಆಸ್ತಿ ವಿತರಕ ವಿಜಯ್ ಭಾರದ್ವಾಜ್ ನಿರಪರಾಧಿಯಾಗಿದ್ದು ಹತ್ಯೆಯಲ್ಲಿ ಇತರರ ಕೈವಾಡವಿರಬಹುದು ಎಂದು ರಾಜ್‌ಬಿರ್ ಪತ್ನಿ ನರ್ಮದಾ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ.
ನನ್ನ ಗಂಡ ದೆಹಲಿ ಪೊಲೀಸ್‌ನ ಉನ್ನತ ಅಧಿಕಾರಿಯಾಗಿದ್ದು ಯಕಶ್ಚಿತ ಒಬ್ಬ ಆಸ್ತಿ ವಿತರಕ ವಿಜಯ್ ಭಾರದ್ವಾಜ್ ಅವರನ್ನು ಅಷ್ಟು ಸುಲಭವಾಗಿ ಹತ್ಯೆ ಮಾಡಲು ಸಾಧ್ಯವಿಲ್ಲವೆಂದು ಹೇಳಿದ್ದಾರೆ.
ದೆಹಲಿ ಪೊಲೀಸರು ಕೊಲೆ ಪ್ರಕರಣದ ಆರಂಭದಿಂದ ದಿನಕ್ಕೊಂದು ಹೇಳಿಕೆ ನೀಡಿ ವಿಚಿತ್ರ ತಿರುವು ಮೂಡಿಸುವ ಕಾರ್ಯದಲ್ಲಿ ನಿರತರಾಗಿರುವುದಕ್ಕೆ ಕಾರಣವಾದರೂ ಎನು? ಎಂದು ನರ್ಮದಾ ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್‌ಬಿರ್ ಪತ್ನಿ ನರ್ಮದಾ, ಹತ್ಯೆಯಾದ ಕೂಡಲೇ ಕುಟುಂಬಕ್ಕೆ ಮಾಹಿತಿ ನೀಡುವಲ್ಲಿ ವಿಳಂಬ ನೀತಿ ಅನುಸರಿಸಿದ್ದೇಕೆ? ನನ್ನ ಗಂಡ ದೆಹಲಿ ಪೊಲೀಸ್ ಪಡೆಯ ಉನ್ನತಾಧಿಕಾರಿಯಾಗಿದ್ದು ಝಡ್ ಶ್ರೇಣಿಯ ಭಧ್ರತೆ ನೀಡಲಾಗಿತ್ತು.ಹತ್ಯೆಯಾದ ದಿನದಂದು ಝಡ್ ಶ್ರೇಣಿಯ ಭಧ್ರತಾ ಸಿಬ್ಬಂದಿ ಎಲ್ಲಿ ಹೋಗಿತ್ತು ಎಂದು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.
ರಾಜ್‌ಬಿರ್ ಪತ್ನಿ ನರ್ಮದಾ ತಮ್ಮ ಗಂಡ ರಾಜ್‌ಬಿರ್ ಹತ್ಯೆಯ ಕುರಿತಂತೆ ದಾಖಲಾಗಿರುವ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.
|