ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪ್ರಧಾನಿ ಕಚೇರಿ ಬಳಿ ಗುಂಡಿನ ಹಾರಾಟ
ಅತಿ ಭಧ್ರತಾ ಪ್ರದೇಶವಾದ ಪ್ರಧಾನಿ ಕಚೇರಿಯ ಸೌಥ್ ಬ್ಲಾಕ್‌ ಬಳಿ ಪೊಲೀಸ್ ಪೇದೆಯೊಬ್ಬ ಕಮ್ಯಾಂಡೊ ಮೇಲೆ ಗುಂಡಿನ ದಾಳಿ ನಡೆಸಿದ ಘಟನೆ ವರದಿಯಾಗಿದೆ.

ಗಾಯಗೊಂಡ ಕಮ್ಯಾಂಡೊ ಸಂಜಯ್ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದು,ಹತ್ತಿರದ ಡಾ.ರಾಮ್‌ಮನೋಹರ್ ಲೋಹಿಯಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಸಲಾಗಿದೆ

ಪ್ರಧಾನ ಮಂತ್ರಿಯವರ ಕಚೇರಿಯ ಹೊರಭಾಗದಲ್ಲಿ ಪೊಲೀಸ್ ನಿಯಂತ್ರಣ ಕೊಠಡಿಯಲ್ಲಿ ಪೊಲೀಸ್ ಪೇದೆಯನ್ನು ವಿಕ್ಟರ್ 37 ಎನ್ನುವ ಕೋಡ್‌ ಹೆಸರಿನಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ಪ್ರತ್ಯಕ್ಷ ದರ್ಶಿಗಳ ಪ್ರಕಾರ ದೆಹಲಿ ಸಶಸ್ತ್ರ ವಿಭಾಗದಲ್ಲಿದ್ದ ಪೊಲೀಸ್ ಪೇದೆ, ಕಮ್ಯಾಂಡೊ ಸಂಜಯ್‌ನ ತೊಡೆಯ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ ಎಂದು ಹೇಳಿಕೆ ನೀಡಿದ್ದಾರೆ.

ಘಟನೆಯ ವರದಿ ತಿಳಿಯುತ್ತಲೇ ವಿಶೇಷ ಭಧ್ರತಾಪಡೆಗಳ ಹಾಗೂ ಗುಪ್ತಚರದಳದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದು, ಅಕಸ್ಮಿಕವಾಗಿ ಗುಂಡುಹಾರಿದೆ ಅಥವಾ ಉದ್ದೇಶಪೂರ್ವಕ ಮಾಡಿದ ಕೃತ್ಯವೊ ಎನ್ನುವ ಕುರಿತಂತೆ ತನಿಖೆ ನಡೆಸುತ್ತಿದ್ದಾರೆ.

ಭಧ್ರತಾ ಪಡೆಗಳಿಗೆ ನೀಡಿದ ರೈಫಲ್‌ನಿಂದ, ಎಲ್‌ಎಂಜಿಯಿಂದ ಅಥವಾ ಸಾಮಾನ್ಯ ರಿವಾಲ್ವರ್‌‌ನ್ನು ಪೊಲೀಸ್ ಪೇದೆ ಗುಂಡು ಹಾರಿಸಲು ಬಳಸಿದ್ದಾನೆ ಎನ್ನುವುದು ಇನ್ನು ಖಚಿತವಾಗಿಲ್ಲವೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನಾ ಸುದ್ದಿ ತಿಳಿಯುತ್ತಿದ್ದಂತೆ ಭಾರಿ ಬಿಗಿ ಭಧ್ರತೆಯನ್ನು ಹೆಚ್ಚಿಸಲಾಗಿದ್ದು ಹಿರಿಯ ಅಧಿಕಾರಿಗಳು ತನಿಖೆಯನ್ನು ಮುಂದುವರಿಸಿದ್ದಾರೆ ಎಂದು ಅಧಿಕಾರಿ ಮೂಲಗಳು ತಿಳಿಸಿವೆ.
ಮತ್ತಷ್ಟು
ರಾಜ್‌ಬಿರ್ ಹತ್ಯೆಯಲ್ಲಿ ವಿಐಪಿ ರಿವಾಲ್ವರ್ ಬಳಕೆ
ರಾಜ್‌ಬೀರ್ ಹತ್ಯೆಯಲ್ಲಿ ಭಾರದ್ವಾಜ್ ನಿರಪರಾಧಿ -ನರ್ಮದಾ
ಅಮಿರ್‌ಖಾನ್ ವಿರುದ್ದ ವಾರೆಂಟ್ ಜಾರಿ
ಕೃಷಿ ಸಾಲ ಪರಿಹಾರ ನಿಧಿಗೆ ಕೇಂದ್ರದ ಅನುಮೋದನೆ
ಬಾಬಾ ರಾಮ್‌ದೇವ್‌ಗೆ ಬೆದರಿಕೆ ಪತ್ರ
ಇಂದೋರ್‌ನಲ್ಲಿ ಸಿಮಿ ಮುಖ್ಯಸ್ಥನ ಬಂಧನ