ಚತ್ತಿಸ್‌ಗಢ ರಾಜ್ಯದ ದುರ್ಗ್ ಜಿಲ್ಲೆಯಲ್ಲಿರುವ ಭಿಲಾಯಿ ಸ್ಟೀಲ್ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದ 8ಮಂದಿ ಅಧಿಕಾರಿಗಳನ್ನು ಮಾವೋವಾದಿಗಳು ಗುರುವಾರದಂದು ಅಪಹರಿಸಿದ್ದು, ಇಂದು ಬಿಡುಗಡೆ ಗೊಳಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ..
ರಾಜಧಾನಿಯಿಂದ 160 ಕಿ.ಮಿ. ದೂರದಲ್ಲಿರುವ ದುರ್ಗ್ ಜಿಲ್ಲೆಯಲ್ಲಿರುವ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಘಟಕದಿಂದ ಸಶಸ್ತ್ರ ಮಾವೋವಾದಿಗಳು 1.7 ಟನ್ ಸ್ಪೋಟಕಗಳು ಹಾಗೂ ಸ್ಪೋಟಕ ಸಿಡಿಸುವ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದಾರೆಂದು ಜಿಲ್ಲಾ ವರಿಷ್ಠಾಧಿಕಾರಿ ಕಬ್ರಾ ತಿಳಿಸಿದ್ದಾರೆ.
ಟ್ರಕ್ ಹಾಗೂ ಘಟಕದ ವ್ಯಾನ್ ತುಂಬಾ ಸ್ಪೋಟಕಗಳನ್ನು ತುಂಬಿಕೊಂಡು ಪರಾರಿಯಾಗಿದ್ದಾರೆಂದು ಪೊಲೀಸ್ ಮೂಲಗಳು ತಿಳಿಸಿವೆ.
ಅರಣ್ಯ ಇಲಾಖೆಯ ಅಧಿಕಾರಿ ರಾಜ್‌ಬಿರ್‌ಸಿಂಗ್, ಘಟಕದ ವ್ಯವಸ್ಥಾಪಕ ಭಾನುಪ್ರತಾಪೂರ್ ಸಹಾಯಕ ಡಿ.ಸಲಾಮ್ ಮತ್ತು ಐವರು ಘಟಕದ ಉದ್ಯೋಗಿಗಳು ಅಪಹೃತರಾಗಿದ್ದರು ಎಂದು ಜಿಲ್ಲಾ ವರಿಷ್ಠಾಧಿಕಾರಿ ಕಬ್ರಾ ತಿಳಿಸಿದ್ದಾರೆ.
ಮಾರ್ಚ್ 18 ರಂದು ಆಂಧ್ರಪ್ರದೇಶ ಮತ್ತು ಚತ್ತಿಸಗಢ ಪೊಲೀಸರು 17 ಮಂದಿ ಮಾವೋವಾದಿಗಳನ್ನು ಹತ್ಯೆಯನ್ನು ಪ್ರತಿಭಟಿಸಿ ಚತ್ತಿಸಗಢ ಹಾಗೂ ತೆಲಂಗಾಣ ಬಂದ್‌ಗೆ ಕರೆ ನೀಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
|