ಪ್ರಧಾನಿಯವರ ಕಚೇರಿಯ ಹೊರ ಆವರಣದಲ್ಲಿ ಗುಂಡು ಹಾರಿ ಕಮ್ಯಾಂಡೊ ಗಾಯಗೊಂಡ ಘಟನೆಯಲ್ಲಿ ಗುಂಡು ಹಾರಿರುವುದು ಅಕಸ್ಮಿಕವಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸ್ ಪೇದೆ ಸಂಜಯ್ ಕುಮಾರ್ ಹಾಗೂ ಸುರಾಜ್‌ಪಾಲ್ ಪರಸ್ಪರರ ಶಸ್ತ್ರಗಳಿಗೆ ಗುಂಡುಗಳನ್ನು ಹಾಕುವುದು ಹೇಗೆ ಎನ್ನುವುದನ್ನು ಪರಿಕ್ಷಿಸುತ್ತಿದ್ದಾಗ ಗುಂಡು ಹಾರಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಂಗೊಂಡ ಸಂಜಯನನ್ನು ತ್ತಿರದ ಡಾ.ರಾಮ್‌ಮನೋಹರ್ ಲೋಹಿಯಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಸಲಾಗಿದೆ.ಸುರಾಜ್‌ಪಾಲ್‌ನನ್ನು ಕರ್ತವ್ಯದಿಂದ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅತಿ ಭಧ್ರತಾ ಪ್ರದೇಶವಾದ ಪ್ರಧಾನಿ ಕಚೇರಿಯ ಸೌಥ್ ಬ್ಲಾಕ್‌ನಲ್ಲಿ ಉನ್ನತ ಸರಕಾರಿ ಅಧಿಕಾರಿಗಳ ಕಚೇರಿಗಳಿದ್ದು, ರಾಜಧಾನಿಯಲ್ಲಿ ಬಿಗಿಭಧ್ರತೆಯಿರುವ ಪ್ರದೇಶವಾಗಿದೆ.
|