ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶಸ್ತ್ರಾಸ್ತ್ರ ಪಡೆಯಲ್ಲಿ ಕಾಡುತ್ತಿರುವ ಸಿಬ್ಬಂದಿ ಕೊರತೆ
ಸೇನೆಯಲ್ಲಿ ಸಿಬಂದಿಗಳ ಕೊರತೆ ಇರುವುದನ್ನು ಗಮನಿಸಿ ಇದೊಂದು ಕಳವಳಕಾರಿ ವಿಚಾರ ಎಂದಿರುವ ರಕ್ಷಣಾ ಸಚಿವ ಎ.ಕೆ.ಆಂಟನಿ ಈ ಬಗ್ಗೆ ಭೂಸೇನೆ, ಜಲಸೇನೆ ಮತ್ತು ವಾಯು ಸೇನೆಗಳಿಂದ ಸಮಗ್ರ ವರದಿ ಕೋರಿದ್ದಾರೆ.

ನಿಜವಾಗಿ ಸಿಬಂದಿಗಳ ಕೊರತೆ ಇರುವುದು ಸಶಸ್ತ್ರ ದಳ ಅಧಿಕಾರಿ ಮಟ್ಟದಲ್ಲಿ ಇದನ್ನು ಗಮನಿಸಿ ಭೂ ಸೇನೆ, ಜಲಸೇನೆ ಮತ್ತು ವಾಯು ಸೇನೆಗಳಿಗೆ ವಸ್ತುಸ್ಥಿತಿಯ ಅಧ್ಯಯನ ನಡೆಸಿ ವರದಿ ಒಪ್ಪಿಸುವಂತೆ ಹೇಳಲಾಗಿದೆ ಎಂದು ಆಂಟನಿ ಸೇನಾ ಹುದ್ದೆಗಳ ಯುವ ತಲೆಮಾರಿನ ಮಂದಿಗೆ ಆಕರ್ಷಕವಾಗುವಂತೆ ಮಾಡಲು ಸರ್ವ ಪ್ರಯತ್ನ ಮಾಡಬೇಕಾಗುತ್ತದೆ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.

ಅವರು ಇಲ್ಲಿನ ರಕ್ಷಣಾ ಪೆನ್ಶನ್ ತರಬೇತಿ ಕೇಂದ್ರವೊಂದರ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ದೇಶ ಸೇವೆ ಸಲ್ಲಿಸುವುದು ಅದು ಗೌರವದ ಪ್ರಶ್ನೆ, ಅಲ್ಲದೇ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗುವುದು ಕೂಡ ಅಷ್ಟೇ ಮುಖ್ಯವಾದದ್ದು ಎಂದು ಆಂಟನಿ ಹೇಳಿದರು.

ಈ ಸಂದರ್ಭದಲ್ಲಿ ಆರ್ಥಿಕ(ರಕ್ಷಣಾ ಸೇವಾವಿಭಾಗ)ಸಲಹೆಗಾರ ಎನ್.ಕೆ.ನಾರಾಂಗ್ ಮತ್ತು ರಕ್ಷಣಾ ಕಂಟ್ರೋಲರ್ ವಿಭಾಗದ ಲೆಕ್ಕಪರಿಶೋಧಕ ಎಚ್.ಕೆ.ಪನ್ನು ಅವರು ಸಮಾರಂಭದಲ್ಲಿ ಮಾತನಾಡಿದರು.
ಮತ್ತಷ್ಟು
ದೇಶಾದ್ಯಂತ ಸ್ಫೋಟಕ್ಕೆ ಸಂಚು: ಸಿಮಿ
ಪ್ರಧಾನಿ ಕಚೇರಿಯಲ್ಲಿ ಗುಂಡು ಹಾರಿದ್ದು ಅಕಸ್ಮಿಕ
ಮಾವೋವಾದಿಗಳಿಂದ ಅಪಹೃತ ಅಧಿಕಾರಿಗಳ ಬಿಡುಗಡೆ
ಪ್ರಧಾನಿ ಕಚೇರಿ ಬಳಿ ಗುಂಡಿನ ಹಾರಾಟ
ರಾಜ್‌ಬಿರ್ ಹತ್ಯೆಯಲ್ಲಿ ವಿಐಪಿ ರಿವಾಲ್ವರ್ ಬಳಕೆ
ರಾಜ್‌ಬೀರ್ ಹತ್ಯೆಯಲ್ಲಿ ಭಾರದ್ವಾಜ್ ನಿರಪರಾಧಿ -ನರ್ಮದಾ