ಮಹಾರಾಷ್ಟ್ರ ನವನಿರ್ಮಾಣ ಸೇನಾ(ಎಂಎನ್ಎಸ್)ದ ಮುಖ್ಯಸ್ಥ ರಾಜ್ ಠಾಕ್ರೆ ಹಾಗು ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ನಡುವಿನ ವಾಗ್ಯುದ್ಧ ದಿನೇದಿನೇ ತಾರಕಕ್ಕೇರುತ್ತಿದೆ.
ಎಂಎನ್ಎಸ್ ಕಾರ್ಯಕರ್ತರು ಪುಣೆಯ ಭೂವಿವಾದಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಅಮಿತಾಬ್ ಅವರ ವ್ಯಂಗ್ಯಚಿತ್ರವನ್ನೊಳಗೊಂಡ ಭಿತ್ತಿ ಚಿತ್ರವನ್ನು ಪ್ರದರ್ಶಿಸಿರುವ ಹಿನ್ನೆಲೆಯಲ್ಲಿ ತನ್ನ ಮೌನ ಮುರಿದಿರುವ ಬಿಗ್ ಬಿ, ಭಾರತವು ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ ಇದೆ ಎಂದು ಹೇಳಿದ್ದಾರೆ.
"ಪ್ರತಿಯೊಬ್ಬರು ತಾವು ನೆಲೆಸಿರವ ನೆಲದ ಸಂವಿಧಾನ ಹಾಗೂ ಕಾನೂನಿಗೆ ಬದ್ಧರಾಗಿರಬೇಕು. ಇದು ಪ್ರಜಾಪ್ರಭುತ್ವ. ಪ್ರತಿಯೊಬ್ಬರಿಗೂ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವ ಹಕ್ಕಿದೆ. ಈ ವಿಷಯ(ಭೂವಿವಾದ) ನ್ಯಾಯಾಲಯದ ವ್ಯಾಪ್ತಿಯಲ್ಲಿರುವ ಕಾರಣ ತಾನಿದಕ್ಕೆ ಪ್ರತಿಕ್ರಿಯಿಸಲಾರೆ" ಎಂದು ಬಚ್ಚನ್ ಹೇಳಿದ್ದಾರೆ.
ಬಚ್ಚನ್ ಅವರ ಪುಣೆಯ ಭೂದಾನ ವಿವಾದವನ್ನು ಪ್ರಚೋದಿಸುವಂತಹ ಬ್ಯಾನರೊಂದು ಕೇಂದ್ರ ಮುಂಬೈಯ ದಾದರ್ ಜಂಕ್ಷನ್‌ನಲ್ಲಿ ಇತ್ತೀಚೆಗೆ ಹಾರಾಡಿದ್ದು ಬಿಗ್ ಬಿ ಮತ್ತು ಎಂಎನ್ಎಸ್ ನಡುವೆ ಹೊಸ ಹಗ್ಗಜಗ್ಗಾಟವನ್ನು ಹುಟ್ಟುಹಾಕಿದೆ.
|