ವಿಧಾನಸಭೆಯಲ್ಲಿ ಸಹಾಯಕ ಮೇಲ್ವಿಚಾರಕಿಯಾಗಿದ್ದ ಗಾಯಿತ್ರಿ ಪಂಡಾ ಸಭಾಪತಿ ತಮ್ಮ ಮೇಲೆ ಲೈಂಗಿಕ ಕಿರುಕುಳ ಎಸಗಿದ್ದಾರೆಂದು ಆರೋಪಿಸಿ ಪ್ರಕರಣವನ್ನು ದಾಖಲಿಸಿದ ನಂತರ ಕಾಣೆಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸರಕಾರ ಕಾನೂನುಬದ್ದವಾಗಿ ವಿಚಾರಣೆ ನಡೆಸಲಾಗುವುದು ಎನ್ನುವ ಭರವಸೆ ನೀಡಿದ್ದರೂ ಸ್ಪೀಕರ್ ವಿರುದ್ದ ಪ್ರಕರಣ ದಾಖಲಿಸಿದ ಒಂದು ದಿನದ ನಂತರ ಗಾಯಿತ್ರಿ ಪಂಡಾ ಕಾಣೆಯಾಗಿದ್ದಾರೆಂದು ಪೊಲೀಸ್ ಮೂಲಗಳು ತಿಳಿಸಿವೆ.
ವಿಧಾನಸಭೆಯಲ್ಲಿ ಸಹಾಯಕ ಮೇಲ್ವಿಚಾರಕಿಯಾಗಿದ್ದ ಗಾಯಿತ್ರಿ ಪಂಡಾ, ಸಭಾಪತಿ ತಮ್ಮ ಮೇಲೆ ಲೈಂಗಿಕ ಕಿರುಕುಳ ಎಸಗಿದ್ದಾರೆಂದು ಆರೋಪಿಸಿ ಪ್ರಕರಣವನ್ನು ದಾಖಲಿಸಿದ ನಂತರ ಪೊಲೀಸರು ಗಾಯಿತ್ರಿ ನಿವಾಸಕ್ಕೆ ಭೇಟಿ ನೀಡಿದಾಗ ಮನೆಗೆ ಬೀಗಹಾಕಲಾಗಿದೆ ಎಂದು ಪೊಲೀಸ್ ಆಯುಕ್ತ ಅಮಿತಾಬ್ ಠಾಕೂರ್ ತಿಳಿಸಿದ್ದಾರೆ.
ಪೊಲೀಸ್ ಅಧಿಕಾರಿಗಳು ಗಾಯಿತ್ರಿ ಪಂಡಾ ಅವರ ನೆರೆಹೊರೆಯವರ ಹೇಳಿಕೆಗಳನ್ನು ಧ್ವನಿಮುದ್ರಿಸಿಕೊಂಡಿದ್ದು, ವಿಚಾರಣೆ ಮುಂದುವರೆಯಲು ಗಾಯಿತ್ರಿ ಪಂಡಾ ಅವರ ಸಹಕಾರ ಅಗತ್ಯವಿದೆ ಎಂದು ಪೊಲೀಸ್ ಆಯುಕ್ತ ಅಮಿತಾಬ್ ಠಾಕೂರ್ ತಿಳಿಸಿದ್ದಾರೆ.
|