ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚೀನಾದ ವಸ್ತುಗಳನ್ನು ಭಾರತ ನಿಷೇಧಿಸಲಿ-ಫರ್ನಾಂಡಿಸ್
ಭಾರತ ಸೇರಿದಂತೆ ಜಗತ್ತಿನ ಎಲ್ಲ ರಾಷ್ಟ್ರಗಳು ಚೀನಾದ ವಸ್ತುಗಳನ್ನು ನಿಷೇಧಿಸಿ ಟಿಬೆಟ್‌ ಕುರಿತಂತೆ ಇರುವ ಚೀನಾ ದೇಶದ ನಿಲುವನ್ನು ಬದಲಿಸಲು ಒತ್ತಡ ಹೇರಬೇಕು ಎಂದು ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಹೇಳಿದ್ದಾರೆ.

ಟಿಬೆಟ್‌ನ ಸ್ವಾತಂತ್ರ ಕುರಿತಂತೆ ಯಾವುದೇ ಹೇಳಿಕೆಗಳನ್ನು ನೀಡಲು ಸಿದ್ದವಾಗದ ಭಾರತ ಚೀನಾ ದೇಶಕ್ಕೆ ಸಂಪೂರ್ಣ ಶರಣಾಗಿದೆ ಎಂದು ಗುಜರಾತ್‌ನಲ್ಲಿ ಆಯೋಜಿಸಿದ ಪ್ರಾಂತೀಯ ಟಿಬೆಟ್ ಯುವ ಕಾಂಗ್ರೆಸ್‌ ಸಭೆಯಲ್ಲಿ ಫರ್ನಾಂಡಿಸ್ ಮಾತನಾಡುತ್ತಿದ್ದರು.

ಚೀನಾದ ಸಾಮ್ರಾಜ್ಯಶಾಹಿ ನೀತಿಗಳು ನಗ್ನವಾಗಿದ್ದು, ಸಾವಿರಾರು ಪ್ರತಿಭಟನಾಕಾರರನ್ನು ಹತ್ಯೆಗೈದ ಚೀನಾದ ಪೈಶಾಚಿಕ ಕೃತ್ಯಗಳಿಗೆ ಜಗತ್ತೇ ಸಾಕ್ಷಿಯಾಗಿದ್ದು, ಮಾಡು ಇಲ್ಲವೇ ಮಡಿ ಎನ್ನುವ ವಾತಾವರಣ ಟಿಬೆಟ್‌ ನಾಗರಿಕರದ್ದಾಗಿದೆ ಎಂದು ಹೇಳಿದ್ದಾರೆ.

ಶಾಂತಿಯುತ ಮುಗ್ದ ನಾಗರಿಕರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ನಿಲ್ಲಿಸಲು ಜಗತ್ತಿನ ಎಲ್ಲ ರಾಷ್ಟ್ರಗಳು ಟಿಬೆಟ್ ಬೆಂಬಲಕ್ಕೆ ಧಾವಿಸಬೇಕು ಎಂದು ಫರ್ನಾಂಡಿಸ್ ಕರೆ ನೀಡಿದ್ದಾರೆ.

ಒಲಿಂಪಿಕ್ ಜ್ಯೋತಿಯನ್ನು ಭಾರತವನ್ನು ಪ್ರವೇಶಿಸಲು ಬಿಡುವುದಿಲ್ಲ ದೇಶದಲ್ಲಿ ಪ್ರವೇಶಿಸುವುದನ್ನು ತಡೆಯಲು ಶ್ರಮಿಸುವಂತೆ ತಮ್ಮ ಪಕ್ಷದ ಕಾರ್ಯಕರ್ತರಿಗೆ, ಗೆಳೆಯರಿಗೆ ಫರ್ನಾಂಡಿಸ್ ಮನವಿ ಮಾಡಿದ್ದಾರೆ.

ಚೀನಾ ದೇಶದ ಒತ್ತಡದ ಮೇರೆಗೆ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಹಾಗೂ ಟಿಬೆಟ್ ‌ಧಾರ್ಮಿಕ ಗುರು ದಲೈಲಾಮಾ ಅವರ ಭೇಟಿಯನ್ನು ಮುಂದಕ್ಕೆ ಹಾಕಲಾಗಿದೆ ಎಂದು ಜಾರ್ಜ್ ಫರ್ನಾಂಡಿಸ್ ಆರೋಪಿಸಿದ್ದಾರೆ.

ಮತ್ತಷ್ಟು
ಸ್ಪೀಕರ್ ಲೈಂಗಿಕ ಪ್ರಕರಣ: ಪಂಡಾ ನಾಪತ್ತೆ
ಎಸ್‌ಪಿಯೊಂದಿಗೆ ಕಾಂಗ್ರೆಸ್ ಹೊಂದಾಣಿಕೆಗೆ ಸಿದ್ದ
ಸ್ಕಾರ್ಲೇಟ್ ಕೊಲೆ:ಲಂಡನ್‌‌ನತ್ತ ಫಿಯೋನಾ
ಭಾರತ ಚೀನಾಕ್ಕೆ ಮಾರಟವಾಗಿದೆ: ಜಾರ್ಜ್
ಪ್ರಕರಣವೊಂದರಲ್ಲಿ ತೆಲಗಿ ದೊಷಮುಕ್ತ
ಸೋನಿಯಾ ಬೆಲ್ಜಿಯಂ 'ಗೌರವ'ಕ್ಕಿನ್ನೂ ಮುಕ್ತಿ ಇಲ್ಲ