ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇಬ್ಬರು ಸಿಮಿ ಕಾರ್ಯಕರ್ತರ ಬಂಧನ
ನಿಷೇಧಿತ ಸಿಮಿ ಸಂಘಟನೆಯ ಇಬ್ಬರು ಕಾರ್ಯಕರ್ತರನ್ನು ಬಂಧಿಸಿ ಸಿಮಿ ವಿರುದ್ದದ ಕಾರ್ಯಾಚರಣೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ.

ಕಳೆದ ವಾರ ಮಧ್ಯಪ್ರದೇಶದ ಇಂದೋರಿನಲ್ಲಿ 13 ಸಿಮಿ ನಾಯಕರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದು, ಬಿಜೆಪಿ ಉನ್ನತ ನಾಯಕರಾದ ಎಲ್‌.ಕೆ ಅಡ್ವಾಣಿ ಹಾಗೂ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಹತ್ಯೆಗೈಯಲು ರೂಪಿಸಿದ ಸಂಚನ್ನು ಪೊಲೀಸರು ಬಹಿರಂಗಗೊಳಿಸಿದ್ದಾರೆ.

ಹಿಂದುತ್ವ , ಬಾಬ್ರಿ ಮಸೀದಿ ಮತ್ತು ಗೋದ್ರಾ ಘಟನೆಯ ಹಿಂದಿನ ಹಿಂಸಾಚಾರದಲ್ಲಿ ಎಲ್‌.ಕೆ ಅಡ್ವಾಣಿ ಹಾಗೂ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರೇ ಕಾರಣಿಭೂತರಾಗಿದ್ದರಿಂದ ಅವರನ್ನು ಹತ್ಯೆಗೈಯಲು ಸಿಮಿ ಸಂಘಟನೆಯ ಪಟ್ಟಿಯಲ್ಲಿ ಮೊದಲನೆಸ್ಥಾನವನ್ನು ಪಡೆದಿದ್ದಾರೆ ಎಂದು ಹೇಳಲಾಗಿದೆ.

ನಿಷೇಧಿತ ಉಗ್ರಗಾಮಿ ಸಂಘಟನೆಯಾದ ಸಿಮಿ ತನ್ನ ಉಗ್ರಗಾಮಿ ಸದಸ್ಯರಿಗಾಗಿ ಭಯೋತ್ಪಾದಕ ತರಬೇತಿ ಶಿಬಿರಗಳನ್ನು ನಡೆಸುತ್ತಿದ್ದು, ದೇಶದಲ್ಲಿ ಭಯೋತ್ಪಾದನೆ ಕೃತ್ಯಗಳನ್ನು ಎಸಗಲು ಸಿದ್ದತೆ ನಡೆಸಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ದೇಶದಲ್ಲಿರುವ ಶಾಂತಿಯತೆಗೆ ಭಂಗತರುವುದಲ್ಲದೇ ಮಾಜಿ ಮುಖ್ಯಮಂತ್ರಿ ಉಮಾಭಾರತಿ ವಿಶ್ವಹಿಂದೂ ಪರಿಷತ್‌ನ ಅಶೋಕ್ ಸಿಂಘಾಲ್ ಮತ್ತು ಪ್ರವೀಣ್ ತೂಗಾಡಿಯಾ ಮತ್ತು ದೇಶದ ಉನ್ನತ ನಾಯಕರನ್ನು ಹತ್ಯೆಗೈಯುವ ಉದ್ದೇಶ ಹೊಂದಿದ್ದರು ಎಂದು ಇಂದೋರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶುಂಮನ್ ಯಾದವ್ ತಿಳಿಸಿದ್ದಾರೆ.

ಮತ್ತಷ್ಟು
ಚೀನಾದ ವಸ್ತುಗಳನ್ನು ಭಾರತ ನಿಷೇಧಿಸಲಿ-ಫರ್ನಾಂಡಿಸ್
ಸ್ಪೀಕರ್ ಲೈಂಗಿಕ ಪ್ರಕರಣ: ಪಂಡಾ ನಾಪತ್ತೆ
ಎಸ್‌ಪಿಯೊಂದಿಗೆ ಕಾಂಗ್ರೆಸ್ ಹೊಂದಾಣಿಕೆಗೆ ಸಿದ್ದ
ಸ್ಕಾರ್ಲೇಟ್ ಕೊಲೆ:ಲಂಡನ್‌‌ನತ್ತ ಫಿಯೋನಾ
ಭಾರತ ಚೀನಾಕ್ಕೆ ಮಾರಟವಾಗಿದೆ: ಜಾರ್ಜ್
ಪ್ರಕರಣವೊಂದರಲ್ಲಿ ತೆಲಗಿ ದೊಷಮುಕ್ತ