ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಾರಾಬಂಕಿ ಪ್ರಕರಣ: ಅಮಿತಾಬ್ ಪರ ತೀರ್ಪು
ಬಾರಾಬಂಕಿ ಭೂ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್‌ಗೆ ಕ್ಲೀನ್ ಚಿಟ್ ನೀಡಿದ ಅಲಹಾಬಾದ್ ಉಚ್ಚ ನ್ಯಾಯಾಲಯದ ತೀರ್ಪಿನ ವಿರುದ್ದ ಮಧ್ಯಪ್ರವೇಶಿಸುವುದಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿಕೆ ನೀಡಿರುವುದು ಅಮಿತಾಬ್‌ಗೆ ಜಯ ಲಭಿಸಿದಂತಾಗಿದೆ.

ಅಮಿತಾಬ್ ಬಚ್ಚನ್ ಭೂ ದಾಖಲೆಗಳನ್ನು ನಕಲಿಯಾಗಿ ಸೃಷ್ಟಿಸಿ ಭೂಮಿಯನ್ನು ಖರೀದಿಸಿದ್ದರಿಂದ ಅವರ ವಿರುದ್ದ ಅಪರಾಧ ಪ್ರಕರಣದ ವಿಚಾರಣೆ ನಡೆಸಬೇಕು ಎಂದು ಉತ್ತರ ಪ್ರದೇಶದಲ್ಲಿರುವ ಮಾಯಾವತಿ ಸರಕಾರ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿತ್ತು.

ಬಾರಾಬಂಕಿಯಲ್ಲಿರುವ ಭೂಮಿಯ ಮೇಲೆ ಅಮಿತಾಬ್ ಬಚ್ಚನ್ ಹಕ್ಕನ್ನು ಸಾಧಿಸಿದ್ದರಿಂದ ಅವರ ವಿರುದ್ದ ಅಪರಾಧ ಪ್ರಕರಣ ಕುರಿತಂತೆ ವಿಚಾರಣೆ ನಡೆಸುವ ಅಗತ್ಯವಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಸ್ಪಷ್ಟವಾಗಿ ಆದೇಶ ನೀಡಿದೆ.

ಮುಖ್ಯ ನ್ಯಾಯಮೂರ್ತಿ ಕೆ.ಜಿ ಬಾಲಕೃಷ್ಣನ್ ಮತ್ತು ನ್ಯಾಯಾಧೀಶ ಅಫ್ತಾಬ್ ಅಲಮ್ ಸರಕಾರದ ಮೇಲ್ಮನವಿಯನ್ನು ತಳ್ಳಿ ಹಾಕಿ ಉತ್ತರಪ್ರದೇಶ ಸರಕಾರ ಅಮಿತಾಬ್ ವಿರುದ್ದ ಅಪರಾಧ ಹಾಗೂ ಸಿವಿಲ್ ಪ್ರಕರಣಗಳಲ್ಲಿ ಆರೋಪಿಯಾಗಿಸುವಂತಿಲ್ಲ ಅಥವಾ ಕಂದಾಯ ಇಲಾಖೆ ಅವರನ್ನು ಅಡ್ಡಿಪಡಿಸುವಂತಿಲ್ಲ ಎಂದು ಘೋಷಿಸಿತು.

ಕಳೆದ 2007 ಡಿಸೆಂಬರ್ 11ರಂದು ಅಲಹಾಬಾದ್ ಹೈಕೋರ್ಟ್ ಬಾರಾಬಂಕಿ ಭೂಮಿಯ ವಿವಾದದಲ್ಲಿ ವಂಚನೆ ಅಥವಾ ಕಂದಾಯ ಇಲಾಖೆಯ ದಾಖಲೆಗಳನ್ನು ತಿದ್ದಿದ ಯಾವುದೇ ಸಾಕ್ಷಾಧಾರಗಳು ಲಭ್ಯವಿಲ್ಲವಾದ್ದರಿಂದ ಅವರನ್ನು ಆರೋಪದಿಂದ ಮುಕ್ತಗೊಳಿಸಲಾಗಿದೆ ಎಂದು ತೀರ್ಪನ್ನು ನೀಡಿರುವುದನ್ನು ಸ್ಮರಿಸಬಹುದು.
ಮತ್ತಷ್ಟು
ಶ್ರೀನಗರ್: ಹಿಜ್ಬುಲ್ ಕಮಾಂಡರ್ ಬಂಧನ
ಇಬ್ಬರು ಸಿಮಿ ಕಾರ್ಯಕರ್ತರ ಬಂಧನ
ಚೀನಾದ ವಸ್ತುಗಳನ್ನು ಭಾರತ ನಿಷೇಧಿಸಲಿ-ಫರ್ನಾಂಡಿಸ್
ಸ್ಪೀಕರ್ ಲೈಂಗಿಕ ಪ್ರಕರಣ: ಪಂಡಾ ನಾಪತ್ತೆ
ಎಸ್‌ಪಿಯೊಂದಿಗೆ ಕಾಂಗ್ರೆಸ್ ಹೊಂದಾಣಿಕೆಗೆ ಸಿದ್ದ
ಸ್ಕಾರ್ಲೇಟ್ ಕೊಲೆ:ಲಂಡನ್‌‌ನತ್ತ ಫಿಯೋನಾ