ಲೈಂಗಿಕ ಕಿರುಕುಳ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಒರಿಸ್ಸಾದ ವಿಧಾನಸಭೆಯ ಸ್ಪೀಕರ್ ಮಹೇಶ್ವರ್ ಮೊಹಾಂತಿ ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ಸಲ್ಲಿಸಿದ್ದಾರೆ.
ವಿಧಾನಸಭೆಯ ಸಹಾಯಕ ಮೇಲ್ವಿಚಾರಕಿ ಗಾಯಿತ್ರಿ ಪಂಡಾ ಪೊಲೀಸ್ ಠಾಣೆಯಲ್ಲಿ ಲೈಂಗಿಕ ಕಿರುಕುಳ ಕುರಿತಂತೆ ಮೊಹಾಂತಿ ವಿರುದ್ದ ಕ್ರಿಮಿನಲ್ ಪ್ರಕರಣದ ಎಫ್.ಐ.ಆರ್ ದಾಖಲಿಸಿದ್ದರಿಂದ ಮೊಹಾಂತಿ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ವಿಧಾನಸಭೆಯ ಮೂಲಗಳು ತಿಳಿಸಿವೆ.
ಸ್ಪೀಕರ್ ಮೊಹಾಂತಿ ವಿರುದ್ದ ಸೆಕ್ಷನ್ 506, 509,507, 34 ಅನುಚ್ಚೇದದ ಪ್ರಕಾರ ದೂರನ್ನು ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
|