ಉತ್ತರಪ್ರದೇಶದ ಸರಕಾರದ ವಿರುದ್ಧ ಹೋರಾಟಕ್ಕೆ ಸಿದ್ದರಾಗುವಂತೆ ಕರೆ ನೀಡಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅಗತ್ಯವಾದಲ್ಲಿ ಕಾರ್ಯಕರ್ತರೊಂದಿಗೆ ಸಂಸದ ರಾಹುಲ್ ಗಾಂಧಿ ಕೂಡಾ ಜೈಲಿಗೆ ಹೋಗಲು ಸಿದ್ದರಾಗಿದ್ದಾರೆ ಎಂದು ಘೋಷಿಸಿದ್ದಾರೆ.
ಅಡಳಿತಾರೂಢ ಮಾಯಾವತಿ ಸರಕಾರಕ್ಕೆ ಲೆಕ್ಕ ಕೇಳಬೇಕಾಗಿದೆ. ಅಗತ್ಯವಾದಲ್ಲಿ ಜೈಲಿಗೆ ಹೋಗಲು ಸಿದ್ಧರಾಗಬೇಕಿದೆ. ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷ ಹೆಚ್ಚಿನ ಅಭ್ಯರ್ಥಿಗಳನ್ನು ಗೆಲ್ಲಿಸಲು ಕಾರ್ಯಕರ್ತರು ಶ್ರಮಪಡಬೇಕಾಗಿದೆ ಎಂದು ಸೋನಿಯಾಗಾಂಧಿ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಜೈಲಿಗೆ ಹೋಗುವವರೆಗೂ ಉತ್ತರಪ್ರದೇಶದಲ್ಲಿ ಬದಲಾವಣೆ ಕಾಣಲು ಸಾಧ್ಯವಿಲ್ಲ. ನೀವುಗಳು ಸಿದ್ಧರಾಗಿದ್ದಿರಾ ಎಂದು ಸೋನಿಯಾ ಗಾಂಧಿ ಕಾರ್ಯಕರ್ತರನ್ನು ಪ್ರಶ್ನಿಸಿದರು.
ವೇದಿಕೆಯ ಮೇಲಿದ್ದ ರಾಹುಲ್‌ರತ್ತ ಬೆರಳು ತೋರಿಸಿದ ಸೋನಿಯಾ, ಅಗತ್ಯವಾದಲ್ಲಿ ರಾಹುಲ್ ಕೂಡಾ ಜೈಲಿಗೆ ಹೋಗಲು ಸಿದ್ದರಾಗಿದ್ದಾರೆ ಎಂದು ಹೇಳಿದರು.
|