ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಫೆಬ್ರವರಿಗೆ ಲೋಕಸಭಾ ಚುನಾವಣೆ: ಅಡ್ವಾಣಿ
ಬಿಜೆಪಿ ಆಡಳಿತವಿರುವ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಚತ್ತೀಸ್‌‌ಗಢ ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶಗಳು ಹೊರಬಿದ್ದ ನಂತರ ಮುಂದಿನ ವರ್ಷದ ಜನವರಿ ಅಥವಾ ಫೆಬ್ರುವರಿ ತಿಂಗಳಿನಲ್ಲಿ ಲೋಕಸಭೆ ಚುನಾವಣೆ ನಡೆಯುವ ಸಾಧ್ಯತೆ ಇದೆ ಎಂದು ಬಿಜೆಪಿಯ ಹಿರಿಯ ಧುರೀಣ ಎಲ್.ಕೆ.ಆಡ್ವಾಣಿ ಭವಿಷ್ಯ ನುಡಿದಿದ್ದಾರೆ.

ಈ ವರ್ಷಾಂತ್ಯಕ್ಕೆ ನಿಗದಿಯಾಗಿರುವ ರಾಜಸ್ಥಾನ, ಮಧ್ಯಪ್ರದೇಶ, ದೆಹಲಿ, ಚತ್ತೀಸ್‌‌ಗಢ ರಾಜ್ಯಗಳ ವಿಧಾನಸಭಾ ಚುನಾವಣೆಗಳ ಫಲಿತಾಂಶಗಳನ್ನು ಅವಲೋಕಿಸಿ,ಯುಪಿಎ ಸರಕಾರ ಮುಂದಿನ ವರ್ಷದ ಫೆಬ್ರುವರಿಯಲ್ಲಿ ಲೋಕಸಭೆಗೆ ಚುನಾವಣೆ ನಡೆಸುವ ಸಾಧ್ಯತೆ ಇರುವುದಾಗಿ ಹೇಳಿದರು.

ಇನ್ನೊಂದೆಡೆ ಕಾಂಗ್ರೆಸ್ ಮತ್ತು ಎಡಪಕ್ಷಗಳು ಬೇಗನೆ ಲೋಕಸಭಾ ಚುನಾವಣೆ ನಡೆದರೆ ಅಮೆರಿಕದೊಂದಿಗಿನ ಪರಮಾಣು ಒಪ್ಪಂದದ ಹಿನ್ನೆಲೆಯಲ್ಲಿ ತಾವು ನಷ್ಟ ಅನುಭವಿಸಬೇಕಾದಿತು ಎಂದು ಭಾವಿಸಿದೆ ಎಂದು ಆಡ್ವಾಣಿ ಅಭಿಪ್ರಾಯ ವ್ಯಕ್ತಪಡಿಸಿದರು.

ಬಿಜೆಪಿ ಆಳ್ವಿಕೆಗೊಳಪಟ್ಟಿರುವ ನಾಲ್ಕು ರಾಜ್ಯಗಳು ಈ ಮುನ್ನ ರೋಗಗ್ರಸ್ತ ರಾಜ್ಯಗಳ ಯಾದಿಯಲ್ಲಿ ಸೇರಿದ್ದವು. ಆದರೆ ಈಗ ಉತ್ತಮ ಅಭಿವೃದ್ಧಿ ಹೊಂದಿದೆ ಎಂದರು.ಯುಪಿಎ ಪಾಲುದಾರರ ಕುರಿತು ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಮತ್ತು ಎಡಪಕ್ಷಗಳು ಪರಮಾಣು ಒಪ್ಪಂದಕ್ಕೆ ಸಂಬಂಧಿಸಿ ದೇಶದಲ್ಲಿ ಅನಿಶ್ಚಿತತೆಯ ವಾತಾವರಣವೊಂದನ್ನು ನಿರ್ಮಿಸಿದೆ ಎಂದರಲ್ಲದೆ, ಎಡಪಕ್ಷದವರಿಗೆ ದೇಶದಲ್ಲಿ ಭವಿಷ್ಯವಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಮತ್ತಷ್ಟು
ರಾಹುಲ್ ಜೈಲಿಗೆ ಹೋಗಲು ಸಿದ್ಧ-ಸೋನಿಯಾ
ಒರಿಸ್ಸಾ ಸ್ಪೀಕರ್ ರಾಜೀನಾಮೆ
ಬಾರಾಬಂಕಿ ಪ್ರಕರಣ: ಅಮಿತಾಬ್ ಪರ ತೀರ್ಪು
ಶ್ರೀನಗರ್: ಹಿಜ್ಬುಲ್ ಕಮಾಂಡರ್ ಬಂಧನ
ಇಬ್ಬರು ಸಿಮಿ ಕಾರ್ಯಕರ್ತರ ಬಂಧನ
ಚೀನಾದ ವಸ್ತುಗಳನ್ನು ಭಾರತ ನಿಷೇಧಿಸಲಿ-ಫರ್ನಾಂಡಿಸ್