ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಣದುಬ್ಬರ ಕಡಿವಾಣಕ್ಕೆ ಕೇಂದ್ರದಿಂದ ಕ್ರಮ
WD
ಬಾಸುಮತಿಯೇತರ ಅಕ್ಕಿ ಹಾಗೂ ಆಹಾರಧಾನ್ಯಗಳ ಮೇಲೆ ನಿಷೇಧ ಮತ್ತು ಕಚ್ಚಾ ತಾಳೆ ಹಾಗೂ ಸೋಯಾ ತೈಲಗಳ ಮೇಲಿನ ಆಮದು ಸುಂಕವನ್ನು ತೆಗೆದು ಹಾಕುವುದು ಸೇರಿದಂತೆ, ರಭಸದ ಕ್ರಮಗಳನ್ನು ಹಣದುಬ್ಬರ ನಿಯಂತ್ರಿಸುವ ಸಲುವಾಗಿ ಸರಕಾರ ಸೋಮವಾರ ಘೋಷಿಸಿದೆ.

ಹಣದುಬ್ಬರವು ನಾಗಾಲೋಟದಿಂದ ಓಡುತ್ತಿದ್ದು, ಮಾರ್ಚ್ 15ಕ್ಕೆ ಕೊನೆಗೊಂಡ ವಾರದಲ್ಲಿ 6.68 ದಾಖಲಿಸಿದೆ. ಇದನ್ನು ತಡೆಗಟ್ಟಲು ಪ್ರಧಾನಿ ಮನಮೋಹನ್ ಸಿಂಗ್ ಅಧ್ಯಕ್ಷತೆಯಲ್ಲಿ ಬೆಲೆಗಳ ಸಂಪುಟ ಸಮಿತಿ(ಸಿಸಿಪಿ)ಯು ಮೂರುಗಂಟೆಗಳ ಸುದೀರ್ಘ ಸಭೆ ನಡೆಸಿದ್ದು ತುರ್ತು ಕ್ರಮಗಳನ್ನು ಕೈಗೊಂಡಿದೆ.

ಕಚ್ಚಾ ರೂಪದ ಎಲ್ಲಾ ಖಾದ್ಯತೈಲಗಳನ್ನು ಇನ್ನು ಸುಂಕರಹಿತವಾಗಿ ಆಮದು ಮಾಡಿಕೊಳ್ಳಬಹುದಾಗಿದೆ. ಶೇ.20ರಷ್ಟಿದ್ದ ಆಮದು ಸುಂಕವನ್ನು ಸಭೆಯಲ್ಲಿ ಶೂನ್ಯಕ್ಕೆ ಇಳಿಸಲಾಯಿತು. ಸಂಸ್ಕರಿತ ಹಾಗೂ ವನಸ್ಪತಿ ತೈಲಗಳ ಮೇಲಿನ ಆಮದು ಸುಂಕ ಶೇ7.5ಕ್ಕೆ ಇಳಿದಿದೆ.

ಬಾಸುಮತಿಯೇತರ ಅಕ್ಕಿಗಳ ರಫ್ತುವನ್ನು ಸಭೆ ನಿಷೇಧಿಸಿದೆ. ಅಂತೆಯೇ ಆಹಾರ ಧಾನ್ಯಗಳ ಮೇಲಿನ ರಫ್ತು ನಿಷೇಧವನ್ನು ಇನ್ನೂ ಒಂದು ವರ್ಷಕ್ಕೆ ವಿಸ್ತರಿಸಲು ನಿರ್ಧರಿಸಲಾಗಿದೆ. ಬಾಸುಮತಿ ಅಕ್ಕಿಯ ಲಭ್ಯತೆಯನ್ನು ದೇಶಿ ಮಾರುಕಟ್ಟೆಯಲ್ಲಿ ಹೆಚ್ಚಿಸಲು ಕನಿಷ್ಠ ರಫ್ತು ಬೆಲೆಯನ್ನು 1,100 ಡಾಲರ್ ಇದ್ದುದನ್ನು 1,200 ಡಾಲರಿಗೆ ಏರಿಸಿದೆ. ಬೆಣ್ಣೆ ಹಾಗೂ ತುಪ್ಪಗಳ ಮೇಲಿನ ಆಮದು ಸುಂಕವನ್ನು ಶೇ40ರಿಂದ 30ಕ್ಕಿಳಿಸಿದೆ.

ಜೋಳದ ಮೇಲಿದ್ದ ಶೇ.15 ಆಮದು ಸುಂಕ ತೊಡೆದು ಹಾಕಲಾಗಿದೆ. ಐದು ಲಕ್ಷ ಟನ್ ಜೋಳವನ್ನು ಸುಂಕ ರಹಿತವಾಗಿ ಆಮದು ಮಾಡಿಕೊಳ್ಳಬಹುದಾಗಿದೆ. ಸರಕಾರದ ಈ ಪ್ರಮುಖ ಕ್ರಮಗಳು ಸೋಮವಾರ ಮಧ್ಯರಾತ್ರಿಯಿಂದ ಜಾರಿಗೆ ಬರುತ್ತವೆ ಎಂದು ಹಣಕಾಸು ಸಚಿವ ಪಿ.ಚಿದಂಬರಂ ಹೇಳಿದ್ದಾರೆ.
ಈ ಕ್ರಮಗಳು ನಾಗಾಲೋಟದಿಂದ ಓಡುತ್ತಿರುವ ಹಣದುಬ್ಬರವನ್ನು ತಡೆಯಲು ಸಹಾಯ ಮಾಡುವುದೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಹಣಕಾಸು ಸಚಿವರು, ಹಾಗೆಂದು ತಾನು ಪ್ರಾಮಾಣಿಕವಾಗಿ ನಂಬಿರುವೆ ಎಂದು ನುಡಿದರು.

ವಾಣಿಜ್ಯ ಹಾಗೂ ಔದ್ಯಮಿಕ ಸಚಿವ ಕಮಲ್ ನಾಥ್, ಕೃಷಿ ಸಚಿವ ಶರದ್ ಪವಾರ್, ರೈಲ್ವೇ ಸಚಿವ ಲಾಲೂ ಪ್ರಸಾದ್ ಯಾದವ್ ಮತ್ತು ಹಣಕಾಸು ಸಚಿವ ಪಿ.ಚಿದಂಬರಂ ಅವರುಗಳು ಪಾಲ್ಗೊಂಡಿದ್ದ ಸಿಸಿಪಿ ಸಭೆಯಲ್ಲಿ, ಉಕ್ಕು ಸಚಿವ ರಾಮ್ ವಿಲಾಸ್ ಪಾಸ್ವಾನ್ ವಿದೇಶದಲ್ಲಿರುವ ಕಾರಣ ಕಬ್ಬಿಣ ಮತ್ತು ಉಕ್ಕು ಮೇಲಿನ ಸುಂಕವನ್ನು ಕಡಿತಗೊಳಿಸುವ ನಿರ್ಧಾರವನ್ನು ಮುಂದೂಡಲಾಯಿತು.
ಮತ್ತಷ್ಟು
ಫೆಬ್ರವರಿಗೆ ಲೋಕಸಭಾ ಚುನಾವಣೆ: ಅಡ್ವಾಣಿ
ರಾಹುಲ್ ಜೈಲಿಗೆ ಹೋಗಲು ಸಿದ್ಧ-ಸೋನಿಯಾ
ಒರಿಸ್ಸಾ ಸ್ಪೀಕರ್ ರಾಜೀನಾಮೆ
ಬಾರಾಬಂಕಿ ಪ್ರಕರಣ: ಅಮಿತಾಬ್ ಪರ ತೀರ್ಪು
ಶ್ರೀನಗರ್: ಹಿಜ್ಬುಲ್ ಕಮಾಂಡರ್ ಬಂಧನ
ಇಬ್ಬರು ಸಿಮಿ ಕಾರ್ಯಕರ್ತರ ಬಂಧನ