ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೇತನ್ ಪಾರಿಖ್‌‌‌ಗೆ ಒಂದು ವರ್ಷ ಸಜೆ
1992ರಲ್ಲಿ ನಡೆದ ಷೇರು ಹಗರಣಕ್ಕೆ ಸಂಬಂಧಿಸಿದಂತೆ ಷೇರು ದಳ್ಳಾಳಿ ಕೇತನ್ ಪಾರಿಖ್‌‌‌ಗೆ ಮುಂಬೈ ಹೈಕೋರ್ಟ್ ಮಂಗಳವಾರದಂದು ಒಂದು ವರ್ಷ ಕಠಿಣ ಸೆರೆಮನೆವಾಸ ಶಿಕ್ಷೆಯನ್ನು ವಿಧಿಸಿದೆ.

ಅಲ್ಲದೇ ಷೇರು ದಳ್ಳಾಳಿಗಳಾದ ಹಿತೇನ್ ದಲಾಲ್ ಹಾಗೂ ಐದು ಮಂದಿಗೆ ಒಂದು ಕಠಿಣ ಶಿಕ್ಷೆ ಮತ್ತು ಮತ್ತಿಬ್ಬರಿಗೆ ಆರು ತಿಂಗಳ ಸಜೆಯನ್ನು ವಿಧಿಸಿದೆ. ಈ ಎಲ್ಲಾ ಆರೋಪಿತರಿಗೂ ನ್ಯಾಯಮೂರ್ತಿ ವಿ.ಎಂ.ಕಾನಡೆ ಅವರು ಜುಲೈ 31ವರೆಗೆ ಜಾಮೀನನ್ನು ವಿಸ್ತರಿಸಿದೆ.

ಕೆನರಾ ಬ್ಯಾಂಕ್‌‌ನ ಅಂಗಸಂಸ್ಥೆಯಾದ ಬೆಂಗಳೂರು ಮೂಲದ ಕ್ಯಾನ್‌‌ಫಿನ್‌‌‌ಗೆ ಸೇರಿದ 47ಕೋಟಿ ರೂಪಾಯಿಗಳನ್ನು ದುರುಪಯೋಗಪಡಿಸಿಕೊಂಡಿದ್ದಕ್ಕಾಗಿ ಮುಂಬೈ ಹೈಕೋರ್ಟ್ ನ್ಯಾಯಾಧೀಶ ವಿ.ಎಂ.ಕಾನಡೆ ಅವರು ಪಾರಿಖ್, ಹಿತೇನ್ ದಲಾಲ್ ಮತ್ತು ಕ್ಯಾನ್‌‌ಫಿನ್ ಅಧಿಕಾರಿಗಳನ್ನು ತಪ್ಪಿತಸ್ಥರು ಎಂದು ಘೋಷಿಸಿದ್ದರು.

ಈ ಹಣವನ್ನು ಮೊದಲು ಕೆನರಾ ಬ್ಯಾಂಕ್ ಮ್ಯೂಚುವಲ್ ಫಂಡ್‌‌ನ ಕೆಲವು ಖಾತೆದಾರರಿಗೆ ತಪ್ಪಾಗಿ ರವಾನಿಸಲಾಗಿತ್ತು. ಬಳಿಕ ವಾಪಸ್ ಪಡೆಯುವಾಗ ಹಣವನ್ನು ಪಾರಿಖ್ ಮತ್ತು ಇತರ ಷೇರು ದಳ್ಳಾಳಿಗಳ ಖಾತೆಗೆ ವರ್ಗಾಯಿಸಲಾಗಿತ್ತು.

ಕ್ರಿಮಿನಲ್ ಸಂಚು ಮತ್ತು ಹಣ ದುರುಪಯೋಗದ ಆರೋಪದಲ್ಲಿ ಪಾರಿಖ್, ಹಾಗೂ ಷೇರು ದಳ್ಳಾಳಿಗಳಾದ ಹಿತೇನ್ ದಲಾಲ್, ಎಸ್.ಕೆ.ಜವೇರಿ, ಪಲ್ಲವ್ ಸೇಠ್ ಮತ್ತು ನವೀನ್ ಚಂದ್ರ ಪಾರಿಖ್, ಕ್ಯಾನ್‌‌ಫಿನ್‌‌ನ ಮಾಜಿ ಉಪಾಧ್ಯಕ್ಷರಾದ ಸಾಯಿನಾಥ್ ಮೋಹನ್, ಎಂ.ಕೆ.ಅಶೋಕ್ ಕುಮಾರ್ ಮತ್ತು ಮಾಜಿ ಜನರಲ್ ಮೆನೇಜರ್ ಬಿ.ಆರ್.ಆಚಾರ್ಯ ಅವರು ಶಿಕ್ಷೆಗೊಳಗಾಗಿದ್ದಾರೆ.

ಕ್ಯಾನ್‌‌ಫಿನ್‌‌ನ ಮಾಜಿ ಉಪಾಧ್ಯಕ್ಷ ಎನ್.ಬಾಲಸುಬ್ರಮಣಿಯಂ, ಮಾಜಿ ಜನರಲ್ ಮೆನೇಜರ್ ಪಿ.ಜೆ.ಸುಬ್ಬಾ ರಾವ್ ಹಾಗೂ ವೈಶ್ಯ ಬ್ಯಾಂಕ್‌‌ನ ಬಿ.ವಿ.ಶ್ರೀನಿವಾಸನ್ ಅವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.
ಮತ್ತಷ್ಟು
ಹೊಗೇನಕಲ್ ಯೋಜನೆ ಪೂರ್ಣಗೊಳಿಸಿಯೇ ಸಿದ್ಧ-ಕರುಣಾ
ಹಣದುಬ್ಬರ ಕಡಿವಾಣಕ್ಕೆ ಕೇಂದ್ರದಿಂದ ಕ್ರಮ
ಫೆಬ್ರವರಿಗೆ ಲೋಕಸಭಾ ಚುನಾವಣೆ: ಅಡ್ವಾಣಿ
ರಾಹುಲ್ ಜೈಲಿಗೆ ಹೋಗಲು ಸಿದ್ಧ-ಸೋನಿಯಾ
ಒರಿಸ್ಸಾ ಸ್ಪೀಕರ್ ರಾಜೀನಾಮೆ
ಬಾರಾಬಂಕಿ ಪ್ರಕರಣ: ಅಮಿತಾಬ್ ಪರ ತೀರ್ಪು