ಜಾರ್ಖಂಡ್‌ನ ಗಾರ್‌ವಾ ಜಿಲ್ಲೆಯಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್)ಯ ಎನ್‌ಕೌಂಟರ್‌ಗೆ ಸುಮಾರು ಎಂಟು ಮಂದಿ ನಕ್ಸಲೀಯರು ಹತರಾಗಿದ್ದಾರೆಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸೋಮವಾರ ರಾತ್ರಿ ಸಿಆರ್‌ಪಿಎಫ್‌ನ 13ನೇ ಬೆಟಾಲಿಯನ್ ಹಾಗೂ ನಕ್ಸಲೀಯರ ನಡುವೆ ಗಾರ್‌ವಾ ಜಿಲ್ಲೆಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಅಂದಾಜು ಎಂಟು ಮಂದಿ ನಕ್ಸಲೀಯರು ಸಾವನ್ನಪ್ಪಿರುವುದಾಗಿ ಅಧಿಕಾರಿ ಮೂಲಗಳು ಹೇಳಿವೆ.
ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ತೀವ್ರ ಕೂಂಬಿಂಗ್ ಕಾರ್ಯಾಚರಣೆಯಲ್ಲಿ ನಿರತವಾಗಿರುವ ಕೇಂದ್ರ ಮೀಸಲು ಪೊಲೀಸ್ ಪಡೆ, ಸೋಮವಾರ ರಾತ್ರಿ ನಕ್ಸಲೀಯರೊಂದಿಗೆ ಮುಖಾಮುಖಿಯಾಗಿದ್ದು ಶರಣಾಗುವಂತೆ ಸೂಚಿಸಿದರೂ ಕೂಡ, ನಕ್ಸಲೀಯರು ಇವರತ್ತ ಗುಂಡಿನ ದಾಳಿ ನಡೆಸಲು ಆರಂಭಿಸಿದಾಗ ಸಿಆರ್‌ಪಿಎಫ್ ಎನ್‌ಕೌಂಟರ್‌ಗೆ ಅವರು ಬಲಿಯಾಗಬೇಕಾಯಿತು ಎಂದು ವಿವರಿಸಿದ್ದಾರೆ.
ನಕ್ಸಲೀಯರಿಂದ ಭಾರೀ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ಹಾಗೂ ಸ್ಫೋಟಕಗಳು, ಸುಮಾರು 20ಕ್ವಿಂಟಾಲ್ ಜಿಲೆಟಿನ್ ಸ್ಫೋಟಕವನ್ನೂ ವಶಪಡಿಸಿಕೊಂಡಿರುವುದಾಗಿ ತಿಳಿಸಿದರು.
|