ಗೋವಾದಲ್ಲಿ ರಜೆ ದಿನಗಳನ್ನು ಕಳೆಯಲು ತಂಗಿದ್ದ ಗೋವಾದ ಫೈವ್‌ಸ್ಟಾರ್ ಹೋಟೆಲ್‌ನಲ್ಲಿ ತಮ್ಮ ಮೇಲೆ ಆರೋಪಿಯೊಬ್ಬ ಅತ್ಯಾಚಾರವೆಸಗಿದ್ದಾನೆಂದು ಆರೋಪಿಸಿ ಅನಿವಾಸಿ ಭಾರತೀಯ ಮಹಿಳೆಯೊಬ್ಬರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ನ್ಯೂಯಾರ್ಕ್ ಮೂಲದ ಅನಿವಾಸಿ ಭಾರತೀಯ ಮಹಿಳೆ ಅತ್ಯಾಚಾರ ನಡೆದ ನಂತರ ಪಣಜಿಯಲ್ಲಿ ಪ್ರಕರಣ ದಾಖಲಿಸದೇ ನೇರವಾಗಿ ದೆಹಲಿಗೆ ತೆರಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ವೈದ್ಯಕೀಯ ಪರೀಕ್ಷೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ದೆಹಲಿ ಪೊಲೀಸರಿಂದ ಬಂದ ಮಾಹಿತಿಯ ಮೇರೆಗೆ ಪಣಜಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಮಾರ್ಚ್ 7 ರಂದು ಅನಿವಾಸಿ ಭಾರತೀಯ ಮಹಿಳೆಯು ತಂಗಿದ್ದ ಕೋಣೆಯಲ್ಲಿ ಪ್ರವೇಶಿಸಿ ಅಪರಿಚಿತನು ಅತ್ಯಾಚಾರವೆಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಣಜಿ ಪೊಲೀಸರು ಪ್ರಕರಣ ದಾಖಲಾದ ಬಗ್ಗೆ ಖಚಿತಪಡಿಸಿದ್ದು, ವೈದ್ಯಕೀಯ ಪರೀಕ್ಷೆಗಾಗಿ ಅವರನ್ನು ಪಣಜಿಗೆ ಕರೆತರಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
|