ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಾಯಾವತಿ ವಿರುದ್ಧ ಹೇಳಿದ್ದು ತಪ್ಪು: ಟಿಕೈಟ್
ಉತ್ತರ ಪ್ರದೇಶದ ಮುಖ್ಯಮಂತ್ರಿ ಮಾಯಾವತಿಯವರನ್ನು ಜಾತೀಯ ಆಧಾರದ ಮೇಲೆ ನಿಂದಿಸಿದ ಭಾರತ್ ಕಿಸಾನ್ ಯುನಿಯನ್‌ ಮುಖಂಡ ಮಹೇಂದ್ರ ಸಿಂಗ್ ಟಿಕೈಟ್ ಅವರನ್ನು ಪೊಲೀಸರು ಮುಜಫ್ಫರ್ ನಗರದಲ್ಲಿ ಬಂಧಿಸಿದ್ದಾರೆ. ಬಂಧನದ ನಂತರ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಮಹೇಂದ್ರ ಸಿಂಗ್ ಟಿಕೈಟ್ ಅವರು ಬಾಯ್ತಪ್ಪಿನಿಂದ ಮಾಯಾವತಿಯವರನ್ನು ನಿಂದಿಸಿದ್ದೇನೆ ಎಂದು ಹೇಳಿದ್ದಾರೆ.

ಸಿಸುಲಿ ಗ್ರಾಮದಿಂದ ಮುಜಫ್ಫರ್ ನಗರಕ್ಕೆ ಆಗಮಿಸಿದ ಮಹೇಂದ್ರ ಸಿಂಗ್ ಅವರನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡ ನಂತರ ಮಾನವ ಸಹಜ ತಪ್ಪು ನಾನು ಎಸಗಿದ್ದೇನೆ. ಮಾಯಾವತಿಯವರನ್ನು ನಾನು ಜಾತಿಯ ಆಧಾರದ ಮೇಲೆ ನಿಂದಿಸಬಾರದಾಗಿತ್ತು ಎಂದಿದ್ದಾರೆ.

ವಾಹನಗಳ ಬೆಂಗಾವಲಿನೊಂದಿಗೆ ಮುಜಫ್ಫರ್ ನಗರದ ಜಾರ್ಜ್ ಕಾಲನಿಯಲ್ಲಿ ಇರುವ ತಮ್ಮ ಪುತ್ರನ ಮನೆಗೆ ಆಗಮಿಸಿದ ನಂತರ ಪೊಲೀಸರು ಬಂಧಿಸಿದರು. ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಗ್ರಾಮದ ಮಹಾಪಂಚಾಯತ್ ತೆಗೆದುಕೊಂಡ ತೀರ್ಮಾನವನ್ನು ತಾನು ಮನ್ನಿಸಿ ಬಂಧನದಿಂದ ದೂರ ಉಳಿಯುವ ಪ್ರಯತ್ನ ಮಾಡಿದ್ದೆ ಇಲ್ಲದೇ ಹೋದಲ್ಲಿ ನಾನು ಶರಣಾಗುವುದಕ್ಕೆ ಸಿದ್ದನಾಗಿದ್ದೆ. ಮಹೇಂದ್ರ್ ಸಿಂಗ್ ಅವರನ್ನು ಬಂಧಿಸುವುದಕ್ಕೆ ಪೊಲೀಸರು ನಡೆಸಿದ ಪ್ರಯತ್ನಕ್ಕೆ ಕೃಷಿಕರು ಪ್ರತಿಭಟಿಸಿದ ಕಾರಣ ಸಿಸುಲಿ ಗ್ರಾಮಸ್ಥರು ಮತ್ತು ಪೊಲೀಸರ ನಡುವೆ ಘರ್ಷಣೆ ಉಂಟಾಗಿತ್ತು.

ಸರಕಾರ ತನ್ನನ್ನು ಬಂಧಿಸುವುದಕ್ಕೆ ಮುಂದಾದ ಕುರಿತು ಮಾತನಾಡಿದ ಅವರು ಇಂತಹ ಪರಿಸ್ಥಿತಿಯನ್ನು ಎದುರಿಸದೇ ಇರುವವರು ಈ ರೀತಿ ಮಾಡುವುದು ಸಹಜ. ನನಗೆ ಅಂತಹ ಒತ್ತಡ ಮತ್ತು ಪರಿಸ್ಥಿತಿಗಳನ್ನು ಎದುರಿಸಿದ ಅನುಭವ ಇದೆ. ಹೆದರುವ ಕಾರಣ ಇಲ್ಲ, ಗ್ರಾಮದ ಕೃಷಿಕ ವರ್ಗ ಶಾಂತವಾಗಿ ಇದ್ದು ತಮ್ಮ ನಿತ್ಯದ ಕೆಲಸಗಳಲ್ಲಿ ತೊಡಗಿಕೊಳ್ಳಬೇಕು ಎಂದು ಹೇಳಿದ್ದಾರೆ.
ಮತ್ತಷ್ಟು
ಸ್ಕಾರ್ಲೇಟ್ ಕೊಲೆ ಸಿಬಿಐಗೆ ಹಸ್ತಾಂತರ
ಗೋವಾ: ಅನಿವಾಸಿ ಭಾರತೀಯಳ ಮೇಲೆ ಅತ್ಯಾಚಾರ
ತಮಿಳರ ರಕ್ಷಣೆಗೆ ಕೇಂದ್ರಕ್ಕೆ ಮನವಿ
ಪೊಲೀಸ್ ಕಾರ್ಯಾಚರಣೆಗೆ 8 ನಕ್ಸಲೀಯರ ಬಲಿ
ಕೇತನ್ ಪಾರಿಖ್‌‌‌ಗೆ ಒಂದು ವರ್ಷ ಸಜೆ
ಹೊಗೇನಕಲ್ ಯೋಜನೆ ಪೂರ್ಣಗೊಳಿಸಿಯೇ ಸಿದ್ಧ-ಕರುಣಾ